ಚಳ್ಳಕೆರೆ :
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದಲ್ಲಿ ಮ್ಯಾಸ ಮಂಡಲದ ಸಾಂಸ್ಕೃತಿಕ ನಾಯಕರಾದ ಶ್ರೀ ಗಾದ್ರಿಪಾಲನಾಯಕನ ನೂತನ ದೇವಸ್ಥಾನ ಲೋಕಾರ್ಪಣೆ ಹಾಗು ಗುಗ್ಗರಿ ಹಬ್ಬ ನಡೆಯಿತು
ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ*
*ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ಮಂಡಳಿಯ ಅಧ್ಯಕ್ಷರಾದ ಡಾ.ಬಿ.ಯೋಗೇಶ್ ಬಾಬು ರವರು ಆಗಮಿಸಿ ಶುಭಾಷಯ ಕೋರಿದ್ದಾರೆ.
ರಾಮಸಾಗರ ಗ್ರಾಮದ ಹಿರಿಯ ಮುಖಂಡರಾದ ಶ್ರೀ ತಿಪ್ಪೇಸ್ವಾಮಿ ಗ್ರಾ.ಪಂ. ಉಪಾಧ್ಯಕ್ಷರು, ಡಾ.ಉಮೇಶ್ ಸೂರಮ್ಮನಹಳ್ಳಿ, ಗುಡ್ಡೋಬಯ್ಯ ಸೂರಮ್ಮನಹಳ್ಳಿ, ಬೋರಯ್ಯ ಉಪನ್ಯಾಸಕರು, ರಾಜುನಾಯಕ ಚೌಳಕೆರೆ, ಶಿವಕುಮಾರ್, ಶಿವಣ್ಣ ರವರ ಜೊತೆಗೂಡಿ ಶ್ರೀಗಾದ್ರಿಪಾಲನಾಯಕ ದೇವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ರಾಮಸಾಗರ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗು ಅಭಿಮಾನಿಗಳು ಉಪಸ್ಥಿತರಿದ್ದರು.

