ಶಿಕ್ಷಣದ ಕೊರತೆಯಿಂದ ಆಧುನಿಕ ಸಮಾಜದಲ್ಲಿ ಗರ್ಭದಿಂದ . ಗೋರಿಯವರೆಗೂ ಹೆಣ್ಣುಮಕ್ಕಳ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಅಪರಾಧಶಾಸ್ತ್ತದ ಚಿಂತಕ ಚಿತ್ರದುರ್ಗ ಪ್ರೊ.ನಟರಾಜ್
ಚಳ್ಳಕೆರೆ : ಸಾಮಾಜಿಕ ಶಿಕ್ಷಣದ ಕೊರತೆಯಿಂದ ಆಧುನಿಕ ಸಮಾಜದಲ್ಲಿ ಗರ್ಭದಿಂದ ಹಿಡಿದು ಗೋರಿಯವರೆಗೂ ಹೆಣ್ಣುಮಕ್ಕಳ ಮೇಲೆ ನಿರಂತರ ಶೋಷಣೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಚಿತ್ರದುರ್ಗ ಅಪರಾಧ ಶಾಸ್ತ್ರ ದ .ನಟರಾಜ ಆತಂಕ ವ್ಯಕ್ತಪಡಿಸಿದರು.
ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಲೈಂಗಿಕ ದೌರ್ಜನ್ಯ ವಿರೋಧಿ ಘಟಕ, ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ.
ಮಹಿಳಾ ದಿನಾಚರಣೆ ಆಚರಣೆ ನೆಪದಲ್ಲಿ ಬರೀ ಸಂಭ್ರಮಾಚರಣೆ ಬಿಟ್ಟು ಮಹಿಳಾ ಸಮೂಹದಲ್ಲಿ ಅರಿವು, ಜಾಗೃತಿ ಮತ್ತು ಎಚ್ಚರಿಕೆಯ ಮಾತುಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕಿದೆ.
ಇದರಿಂದ ಭ್ರೂಣ, ಶಿಶುಹತ್ಯೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ದೌರ್ಜನ್ಯ, ವರದಕ್ಷಣೆ, ಲೈಂಗಿಕ ಕಿರುಕುಳ ಮುಂತಾದ ಪ್ರಕರಣಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತದೆ.
ದುಡಿಮೆ ದಂಧೆ ಮತ್ತು ಅಪಹಪಿ ಜೀವನದಾಸೆಯಿಂದ ಪುರುಷ ಸಮಾಜ ಹೆಣ್ಣುಮಕ್ಕಳ ಅತ್ಯಾಚಾರದ ಮೂಲಕ ಅವರನ್ನು ವೇಶ್ಯವಾಟಿಕೆ ಚಟವಟಿಕೆಗೆ ದೂಡುತ್ತಿದೆ. ಹಾಗಾಗಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ಅವರಲ್ಲಿ ಕಾನೂನಿನ ಅರಿವು ಮೂಡಿಸಬೇಕು ಎಂದು ಹೇಳಿದರು.
ಮಹಿಳಾ ಘಟಕದ ಸಂಚಾಲಕಿ ಪ್ರೊ.ಬಿ.ಜಯಮ್ಮ ಮಾತನಾಡಿ, ಶಿಕ್ಷಣ ಹಾಗೂ ವಿಚಾರವಂತಿಕೆಗೆ ಜತೆಗೆ ಮಹಿಳಾ ಸಮಾಜದ ಬೆಳವಣಿಗೆ ಶ್ರಮಿಸಿದ ಸಾವಿತ್ರಿಬಾಯಿ ಪುಲೆ, ಕಿತ್ತೂರು ಚೆನ್ನಮ್ಮ ಮುಂತಾದ ಸಾಧಕಿಯರ ಆದರ್ಶಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಇತಿಹಾಸ ಪ್ರಾಧ್ಯಾಪಕ ಪ್ರೊ.ಕೆ.ಆರ್.ಜೆ.ರಾಜಕುಮಾರ್ ಮಾತನಾಡಿ, ಸಮಾಜದ ಮಹಿಳೆಯರ ವಿಮೋಚನೆಗೆ ಅಂಬೇಡ್ಕರ್ ರಚಿಸಿರುವ ಸಂವಿಧಾನವೊAದೆ ದಾರಿ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಬಿ.ಎಸ್.ಮಂಜುನಾಥ್ ಮಾತನಾಡಿ, ಗಣಿತ ವಿಜ್ಞಾನ ಪ್ರಾಧ್ಯಾಪಕಿ ಪ್ರೊ.ಜಗದೀಶ್ವರಿ, ಅಂಗ್ಲಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ.ಜಿ.ಟಿ.ಶಶಿಕಲಾ, , ರಸಾಯಿನಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ವಿ.ಬಿ.ನಾಗವೇಣಿ, ಮಂಗಳಗೌರಿ ಮಾತನಾಡಿದರು.
ರಂಗೋಲಿ, ರಸಪ್ರಶ್ನೆ, ನೃತ್ಯ ವಿವಿಧ ಸ್ವಧೆರ್ಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಸಸ್ಯಶಾಸ್ರ ಪ್ರಾಧ್ಯಾಪಕಿ ಬಿ.ನಾಗಶ್ರೀ, ಅಂಗ್ಲಭಾಷಾ ಪ್ರಾಧ್ಯಾಪಕಿ ಪ್ರೊ.ಎಸ್.ಪಿ.ದಿವ್ಯದಾಸ್, ಪ್ರೊ.ಮಹ್ಮದ್ ಸತ್ತಾರ್, ಉಪನ್ಯಾಸಕಿ ದೇವಿಕಾ ಇದ್ದರು.

