ಚಳ್ಳಕೆರೆ :

ನಿಗಧಿತ ಸ್ಥಳದಲ್ಲಿ ಮಾತ್ರವೇ ನಿಮ್ಮ ವಾಹನ ನಿಲ್ಲಿಸಲು ಅವಕಾಶ,
ವಾಹನ ಸವಾರರೆ ಎಚ್ಚರ ಇನ್ನು ಮುಂದೆ ಈ ಸ್ಥಳದಲ್ಲಿ
ವಾಹನ ನಿಲುಗಡೆ ಮಾಡಿ ಸಂಚಾರ ನಿಯಮ
ಉಲ್ಲಂಘಿಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು
ಗ್ಯಾರೆಂಟಿ.

ಹೌದು ಇದು ಚಳ್ಳಕೆರೆ ನಗರದ ಹೃದಯ ಭಾಗ ರಾಷ್ಟ್ರೀ ಹೆದ್ದಾರಿ
ನೆಹರು ವೃತ್ತದಲ್ಲಿ ಬಳ್ಳಾರಿ, ಬೆಂಗಳೂರು, ಚಿತ್ರದುರ್ಗ
ಹಾಗೂ ಪಾವಗಡ ಮಾರ್ಗದ ನಾಲ್ಕು ರಸ್ತೆಗಳು ನೆಹರು
ವೃತ್ತದಲ್ಲಿ ಹಾದು ಹೋಗುವುದರಿಂದ ವಾಹನಗಳ ದಟ್ಟಣೆ
ಹೆಚ್ಚಳದಿಂದ ಅಪಘಾತ ಸಂಭವಿಸುವುಸರಿಂದ ನೆಹರು
ವೃತ್ತದ ಪಾವಗಡ ರಸ್ತೆಯ ಮಹದೇವಿ ರಸ್ತೆ ಕ್ರಾಸ್,
ಬಳ್ಳಾರಿ ರಸ್ತೆಯ ಪೈ.ಮೊಬೈಲ್ ಸೆಂಟರ್ .ಚಿತ್ರದುರ್ಗ
ರಸ್ತೆಯ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಂಗಳೂರು
ರಸ್ತೆಯ ಕಾಂಗ್ರೆಸ್ ಕಚೇಯ ಈ ನಾಲ್ಕು ಮಾರ್ಗದ
ನಿಗದಿ ಪಡಿಸಿದ ಸ್ಥಳದವರೆಗೆ ಯಾವುದೇ
ವಾಹನಗಳನ್ನು ನಿಲುಗಡೆ ನಿಷೇಧಿಸಲಾಗಿದೆ ಎಂದು
ಜಿಲ್ಲಾಧಿಕಾರಿ ವೆಂಕಟೇಸ್ ಸುತ್ತೋಲೆ ಹೊರಡಿಸಿದ್ದಾರೆ.

About The Author

Namma Challakere Local News
error: Content is protected !!