ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 6 ಸಾವಿರ ಮೌಲ್ಯದ 7.200 ಲೀಟರ್ ಮದ್ಯದ ಪೌಚ್ ವಶಕ್ಕೆ..
ಚಳ್ಳಕೆರೆ :
ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ಅಬಕಾರಿ ಇನ್ಸ್ಪೆಕ್ಟರ್ ಸಿ ನಾಗರಾಜು ಹಾಗೂ ಸಬ್ ಇನ್ಸ್ಪೆಕ್ಟರ್ ಟಿ.ರಂಗಸ್ವಾಮಿ,ಡಿ.ಟಿ. ತಿಪ್ಪಯ್ಯ ನೇತೃತ್ವದಲ್ಲಿ ಚಳ್ಳಕೆರೆಯಿಂದ ನನ್ನವಾಳ ಕಡೆಗೆ ಹೋಗುತ್ತಿದ್ದ ಸ್ಕೂಟಿ ವಾಹನವನ್ನು ತಡೆದು ಪರಿಶೀಲಿಸಲಾಗಿ ಈ ವಾಹನದಲ್ಲಿ ಸುಮಾರು 6 ಸಾವಿರ ಮೌಲ್ಯದ 7.200 ಲೀಟರ್ ಮದ್ಯದ ಪೌಚ್ ಗಳನ್ನ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿ ವಾಹನ ಸಮೇತ ಮದ್ಯದ ಪೌಚ್ ವಶಕ್ಕೆ ಪಡೆದ್ದಿದ್ದಾರೆ.
ದಾಳಿ ವೇಳೆ ಅಬಕಾರಿ ಮುಖ್ಯ ಪೇದೆ ಟಿ. ಸೋಮಶೇಖರ್,ಅಬಕಾರಿ ಪೇದೆ ಸಿ. ದರ್ಶನ್ ಕುಮಾರ್.ವಾಹನ ಚಾಲಕ ನವನೀತ ಇದ್ದರು.

