“ಮಾಡಿದಷ್ಟು ನೀಡು ಭಿಕ್ಷೆ ತತ್ವದ ಪ್ರತಿಪಾದಕ ಶ್ರೀಗುರು ತಿಪ್ಪೇರುದ್ರಸ್ವಾಮಿ”- ಶ್ರೀಮತಿ ಯಶೋಧಾ ಪ್ರಕಾಶ್

ಚಳ್ಳಕೆರೆ:- ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿಗಳು ಮಾಡಿದಷ್ಟು ನೀಡು ಭಿಕ್ಷೆ ತತ್ವದ ಪ್ರತಿಪಾದಕರಾಗಿದ್ದರು ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.

ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀಗುರು ತಿಪ್ಪೇರುದ್ರಸ್ವಾಮಿಗಳ ಬಗ್ಗೆ ಉಪನ್ಯಾಸ ನೀಡಿದರು.ನಾವು ಕಾಯಕವನ್ನು ನಿಷ್ಠೆಯಿಂದ ಮಾಡಿದ್ದೆ ಆದರೆ ಅದರಿಂದ ಉತ್ತಮ ಪ್ರತಿಫಲವನ್ನು ಪಡೆಯಲು ಸಾಧ್ಯ ಎಂಬ ನೀತಿಯನ್ನು ತಿಪ್ಪೇರುದ್ರಸ್ವಾಮಿಗಳ ಜೀವನದ ಅಧ್ಯಯನದಿಂದ ತಿಳಿಯಬಹುದು ಎಂದು ತಿಳಿಸಿದರು.ಈ ಸತ್ಸಂಗ ಕಾರ್ಯಕ್ರಮದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಶಾರದಾಮ್ಮ, ತ್ರಿವೇಣಿ, ಶಾಂತಮ್ಮ,ನಯನ, ಯತೀಶ್ ಎಂ ಸಿದ್ದಾಪುರ, ಶೈಲಜ, ಕೃಷ್ಣವೇಣಿ, ವೀರಮ್ಮ, ರಶ್ಮಿ ವಸಂತ, ಸಂಗೀತ, ದ್ರಾಕ್ಷಾಯಣಿ, ಜಯಶೀಲಮ್ಮ, ಜಯಮ್ಮ, ಮಾಣಿಕ್ಯ ಸತ್ಯನಾರಾಯಣ, ಮೀನಾಕ್ಷಿ ಹಾಜರಿದ್ದರು.

About The Author

Namma Challakere Local News
error: Content is protected !!