“ಶಕ್ತಿಯೇ ಜೀವನ ನಮ್ಮ ನಿತ್ಯಮಂತ್ರವಾಗಲಿ”:- ಚೇತನಕುಮಾರ್ ಹೇಳಿಕೆ.
ಚಳ್ಳಕೆರೆ:-ಸಿಡಿಲಸಂತ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಶಕ್ತಿಯೇ ಜೀವನ ಎಂಬ ನುಡಿ ನಮ್ಮ ಬದುಕಿನ ನಿತ್ಯಮಂತ್ರವಾಗಲಿ ಎಂದು ನಗರದ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ಹೇಳಿದರು.
ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರಮದ ಆರಂಭದಲ್ಲಿ ವೇದಘೋಷವನ್ನು ಚಿರಂಜೀವಿ ಸುದೀಪ್ ನಡೆಸಿಕೊಟ್ಟರೆ,ವಿಶೇಷ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು.
ಈ ತರಗತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು,ಈ ಯುವ ತರಗತಿಯಲ್ಲಿ ವೆಂಕಟೇಶ್, ರವಿಕುಮಾರ್,ಅಶ್ವಿನಿ, ಸಂತೋಷಕುಮಾರ್,ಋತ್ವಿಕ್,ಅಂಬಣ್ಣ, ಪುಷ್ಪ,ಗಾಯನ,ಶ್ಯಾಮ್, ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

