ಚಳ್ಳಕೆರೆ :
ಚಿತ್ರದುರ್ಗ; ಕಾಂಗ್ರೆಸ್ ಶಾಸಕರ ಜೊತೆ ಸತೀಶ್
ಜಾರಕಿಹೊಳಿ ರಹಸ್ಯ ಸಭೆ
ಚಿತ್ರದುರ್ಗದ ಹೊರ ವಲಯದ ತೋಟದ ಮನೆಯಲ್ಲಿ, ಸಚಿವ
ಸತೀಶ್ ಜಾರಕಿಹೊಳಿ ಶಾಸಕರ ಜೊತೆ ರಹಸ್ಯ ಸಭೆಯನ್ನಿಂದು
ನಡೆಸಿದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ
ಸತೀಶ್ ಜಾರಕಿಹೊಳಿ, ಈ ರಹಸ್ಯ ಸಭೆ ಕುತೂಹಲ ಕೆರಳಿಸಿದೆ.
ಸಭೆಯಲ್ಲಿ ಪಕ್ಷ, ದಲಿತ ಸಮಾವೇಶದ ಬಗ್ಗೆ ಚರ್ಚೆಯಾಗಿದ್ದು,
ಕುತೂಹಲಕ್ಕೆಡೆ ಮಾಡಿದೆ. ರಹಸ್ಯ ಸಭೆಯಲ್ಲಿ ಡಿಕೆಶಿ ಆಪ್ತ ಸಚಿವ
ಸುಧಾಕರ್, ಶಾಸಕ ವೀರೇಂದ್ರ, ಜಾರಕಿಹೊಳಿ ಆಪ್ತ ಶಾಸಕ
ರಘುಮೂರ್ತಿ ಮತ್ತು ಸಿದ್ದರಾಮಯ್ಯ ಆಪ್ತ ಮಾಜಿ ಸಚಿವ ಹೆಚ್.
ಆಂಜನೇಯ ಇದ್ದರು.

