ಚಳ್ಳಕೆರೆ : ರೈತರು ಇಂದಿನ ದಿನಮಾನಗಳಲ್ಲಿ ಕೃಷಿ ಉತ್ಪಾದನೆ ಜೊತೆಗೆ ಕೃಷಿ ಮಾರುಕಟ್ಟೆಯ ಅರಿವು ಒಳಗೊಂಡಿರಬೇಕು, ಕೇವಲ ಕೃಷಿ ಉತ್ಪಾದನೆಯಿಂದ ಜೀವನ ಅಸನಾಗಲು ಸಾಧ್ಯವಿಲ್ಲ ಅದರಿಂದ ಕೃಷಿ ಮಾರುಕಟ್ಟೆಯು ಕೂಡ ಅಗತ್ಯವಾಗಿದೆ ಎಂದು ಸ್ಥಳೀಯ ಶಾಸಕರು ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಕೃಷಿ ಸಹಾಯಕರ ನಿರ್ದೇಶಕರ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದಂತಹ 2024 -25 ನೇ ಸಾಲಿನ ಜಿಲ್ಲಾ ಪಂಚಾಯತ ಯೋಜನೆಯಡಿ ಸಮಗ್ರ ತೋಟಗಾರಿಕೆ ಪದ್ಧತಿಗಳ ಕುರಿತು ವಿಚಾರ ಸಂಕಿರ್ಣ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಯಲು ಸೀಮೆ ಎಂಬ ಹಣೆ ಪಟ್ಟಿಕಟ್ಟಿಕೊಂಡ ಚಳ್ಳಕೆರೆ ತಾಲ್ಲೂಕು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತನ್ನ ಅಣೆಪಟ್ಟಿಯನ್ನು ಕಳಚಿಕೊಂಡಿದೆ, ಈಗ ಅರೆ ಮಲೆನಾಡು ತಾಲೂಕಾಗಿ ಮಾರ್ಪಟ್ಟಿದೆ, ವೇದಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ಗಳ ನಿರ್ಮಿಸುವುದರಿಂದ ಚಳ್ಳಕೆರೆ ಜನತೆಗೆ ಕೃಷಿಗೆ ಪೂರಕವಾದ ನೀರು ಸಿಗುವುದರಿಂದ ಅಡಕೆ, ತೆಂಗು ದಾಳಿಂಬೆ ಬೆಳೆಗಳ ವಿಸ್ತೀರ್ಣ ಹೆಚ್ಚಾಗಿವೆ.
ಇನ್ನು ಭದ್ರ ಮೇಲ್ದಂಡೆ ಯೋಜನೆ ಕಳೆದ 2002 ರಿಂದ 2025 ರ ತನಕ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಸಂಪೂರ್ಣಗೊಂಡರೆ ನಾಲ್ಕು ಜಿಲ್ಲೆಯ ರೈತರ ಜೀವನ ಅಸನಾಗುತ್ತದೆ, ಆದ್ದರಿಂದ 5300 ಕೋಟಿ ಕೊಡುವ ಭರವಸೆಯನ್ನು ಬಜೆಟ್ ಟಿ ನಲ್ಲಿ ಘೋಷಣೆ ಮಾಡಿದ ಕೇಂದ್ರದ ಬಿಜೆಪಿ ಆಡಳಿತ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡುವುದರಲ್ಲಿ ಎಡುವುತಿದೆ.
ಕೇಂದ್ರ ಸರ್ಕಾರ ಕೊಡುವಂತಹ ಹಣವನ್ನು ಅತಿ ಶೀಘ್ರದಲ್ಲಿ ಬಿಡುಗಡೆಗೊಳಿಸಿದರೆ ಇನ್ನು ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿ ಭದ್ರ ಮೇಲ್ದಂಡೆಯ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಚಿತ್ರದುರ್ಗ ಭಾಗದ ಜನರಿಗೆ ನೀರು ಕೊಟ್ಟು ಅನುಕೂಲವಾಗಲಿದೆ.
ಆದ್ದರಿಂದ ಈ ಭಾಗದ ರೈತರ ಭದ್ರ ಮೇಲ್ದಂಡೆ ಯೋಜನೆ ಆಧಾರವಾಗಿದೆ ಎಂದರು.
ಈ ಸಂದರ್ಭಗಳಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಆರ್.ವಿರುಪಾಕ್ಷಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಶೋಕ್, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಪ್ರವೀಣ್ ಕುಮಾರ್, ಮೇಘನಾ, ಶ್ರೀನಿವಾಸ್, ರೈತ ಸಂಘದ ಸೋಮಗುದ್ದು ರಂಗಸ್ವಾಮಿ, ಕೆಪಿ.ಭೂತಯ್ಯ, ಚಿಕ್ಕಣ್ಣ, ರೆಡ್ಡಿಹಳ್ಳಿ ವೀರಣ್ಣ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ನೇತ್ರಾವತಿ, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ರೈತ ಮುಖಂಡರುಗಳಾದ ತಿಪ್ಪೇಸ್ವಾಮಿ, ಕಾಂತರಾಜ್, ರಮೇಶ್, ಶ್ರೀಕಂಠ ಮೂರ್ತಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.