ಚಳ್ಳಕೆರೆ :

ಸಿ.ವಿ. ರಾಮನ್ ರವರ ನೆನಪಿಗಾಗಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಪಾವಗಡ ರಸ್ತೆ,
ಚಳ್ಳಕೆರೆಯ ಶಾಲಾ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಇದರ ಪ್ರಯುಕ್ತ ಬೆಳಿಗ್ಗೆ 3ನೇ ತರಗತಿಯಿಂದ 6ನೇ ತರಗತಿಯ ಮಕ್ಕಳು ಫುಡ್ ಫೆಸ್ಟ್ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ನಡೆಸಲಾಯಿತ್ತು.

ತದ ನಂತರ ಮದ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸರ್ ಸಿ.ವಿ. ರಾಮನ್ ರವರ ನೆನಪು ಕಾರ್ಯಕ್ರಮವನ್ನು ನಡೆಸಲಾಯಿತು.

ತದನಂತರ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಮಂಜುನಾಥ್ ಸರ್ ಅವರು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್, ಪವಿತ್ರ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಜಗದೀಶ್ , ನಜಿರ್ , ಸ್ನೇಹ , ಶಿವಯೋಗಿ ಆಯೋಜಿಸಿದ್ದರು.

About The Author

Namma Challakere Local News
error: Content is protected !!