ಚಳ್ಳಕೆರೆ :
ಚಿತ್ರದುರ್ಗ: ಖಾತೆ ಮಾಡಿ ಇ- ಸ್ವತ್ತು ನೀಡುವಂತೆ ಏಕಾಂಗಿ
ಪ್ರತಿಭಟನೆ
ಕೊಳಗೇರಿ ನಿವಾಸಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ
ಹಕ್ಕುಪತ್ರ ವಿತರಿಸಿದ್ದು, ಖಾತೆ ಮಾಡಿ ಇ-ಸ್ವತ್ತು ನೀಡುವಂತೆ,
ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಕೊಳಗೇರಿ ನಿವಾಸಿಗಳ
ಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಇಂದು ಏಕಾಂಗಿ
ಪ್ರತಿಭಟನೆ ನಡೆಸಿದರು.
ಕೊಳಗೇರಿ ನಿವಾಸಿಗಳು ಇ-ಸ್ವತ್ತು
ಕೇಳಿದರೆ ಕ್ರಯಪತ್ರವಿಲ್ಲದೆ ಇ-ಸ್ವತ್ತು ಕೊಡುವುದಿಲ್ಲವೆಂದು
ನಗರಸಭೆಯವರು ಉತ್ತರಿಸುತ್ತಿದ್ದಾರೆ. ಕೊಳಗೇರಿಗಳಿಗೆ ಇ-ಸ್ವತ್ತು
ಕೊಟ್ಟು ನೆಮ್ಮದಿಯ ಜೀವನ ನಡೆಸಲು ಗಣೇಶ್ ಒತ್ತಾಯಿಸಿದರು.

