ಚಳ್ಳಕೆರೆ :
ಚಳ್ಳಕೆರೆ ತಾಲ್ಲೂಕಿನ ವಡೆರಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಕಾಟಲಿಂಗೇಶ್ವರ ದೇವರ ಗುಗ್ಗರಿ ಹಬ್ಬದ ನೂರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ಈ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಶಶಿಧರ, ದಳವಾಯಿ ಮೂರ್ತಿ, ಸಿ.ಟಿ.ಶ್ರೀನಿವಾಸ್, ಸಿಪಾಯಿ ಮಂಜುನಾಥ, ಮಹಾಂತೇಶ್, ಸಣ್ಣೀರಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

