ಚಳ್ಳಕೆರೆ :
ಚಿತ್ರದುರ್ಗ: ಸರ್ಕಾರ ದಿವಾಳಿಯಾಗಿದೆ ಎಂದೇಳಿ
ಅನುದಾನ ತಂದಿದ್ದೇನೆ
ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ ಅವರನ್ನ
ಕೇಳಬೇಡಿ, ನೀವೆ ಕೊಡಿ ಎಂದೇಳಿ, ರೈಲ್ವೆ ಗೇಟ್ ಗಳ ಅಭಿವೃದ್ಧಿಗೆ
ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆಂದು ಸಂಸದ
ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿ, ಇದು ಎಲ್ಲಾ ಜಿಲ್ಲೆಗಳ ಪ್ರಶ್ನೆ ಬರುತ್ತದೆ.
ಆದ್ದರಿಂದ ನಾನು ವಿಶೇಷವಾಗಿ ಮನವಿ ಮಾಡಿ ಅನುದಾನ
ತಂದಿದ್ದೇನೆ. 150 ಕೋಟಿ ಅನುದಾನದಲ್ಲಿ ಜಿಲ್ಲೆಯ ಎಲ್ಲಾ ರೈಲ್ವೇ
ಗೇಟ್ ಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

