ಭಗವಂತನ ಸೇವೆಗಿಂತ ಬಡವರ ಕಣ್ಣೀರು ಒರೆಸುವ ಕಾರ್ಯ ಶ್ರೇಷ್ಠವೆಂದು ಸಂತ ಸೇವಾಲಾಲ್ ರವರು ನಂಬಿದ್ದರು ಎಂದು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ಇಂದು ಎನ್ ದೇವರಳ್ಳಿ ಗ್ರಾಮದಲ್ಲಿ ಸೇವಲಾಲ್ ಜಯಂತಿ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಸಮಾಜವೆಂದರೆ ಅದು ಬಂಜಾರ ಸಮುದಾಯ ಈ ಸಮಾಜಕ್ಕೆ ಸಾಂಸ್ಕೃತಿಕ ಮತ್ತು ಸ್ವಾಭಿಮಾನದ ದಿಕ್ಕನ್ನು ತೋರಿಸಿದಂತವರು ಶ್ರೀ ಸೇವಾಲಾಲ್ ಮಹಾರಾಜರು ಈ ಸಮಾಜದ ಮೂಲ ಪುರುಷರು ರಾಥೋಡು ಚೌಹಾಣ್ ಮತ್ತು ಪೊಮ್ಮಾರ್ ಈಗಲೂ ಕೂಡ ಈ ಜನಾಂಗವನ್ನು ಹಲವಾರು ಭಾಗಗಳಲ್ಲಿ ಇದೇ ರೀತಿ ಕರೆಯುತ್ತಾರೆ ಶ್ರೀ ಕೃಷ್ಣನಿಗೆ ಕೊಳಲನ್ನು ನೀಡಿದಂತಹ ಸಮಾಜ ಇದು ಸೇವಾಲಾಲ್ ಅವರು ಅದ್ಭುತವಾದಂತ ಸಮಾಜ ಸೇವ ಕಾರ್ಯಗಳನ್ನು ಕೈಗೊಂಡಿದ್ದರು ಸಮಾಜವನ್ನು ಸಂಘಟಿಸಿದರು ಈಗಲೂ ಈ ಸಮಾಜದವರು ಪ್ರಾಮಾಣಿಕರು ನಂಬಿಕಸ್ಥರು ಸ್ವಾಭಿಮಾನಿಗಳು ಅಷ್ಟೇ ಅಲ್ಲದೆ ಶ್ರಮಿಕರು ಕೂಡ ಇದ್ದಾರೆ
ವಚನ ಸಾಹಿತ್ಯದ12ನೇ ಶತಮಾನದ ಬಸವಣ್ಣ ದಾಸ ಸಾಹಿತ್ಯದ ಕನಕದಾಸರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಪೆರಿಯಾರ್ ಅವರು ನಾರಾಯಣ ಗುರು ಅವರು ಇವರೆಲ್ಲರ ಆದರ್ಶಗಳು ಕೂಡ ಶೋಷಿತ ಸಮುದಾಯ ಮತ್ತು ಬಡವರ ಕಣ್ಣೀರು ಹೊರೆಸುವಂತಹ ಮಹತ್ ಕಾರ್ಯವೇ ಆಗಿತ್ತು ಈ ಮೂಲಪುರುಷರಗಳ ಆದರ್ಶಗಳು ಸಿದ್ಧಾಂತಗಳು ಒಂದು ಕಡೆ ಇದ್ದರೆ ಈ ಆದರ್ಶಗಳನ್ನ ಇಂದಿನ ಯುವ ಪೀಳಿಗೆ ಅಥವಾ ಈ ಸಮಾಜದ ಸೌಲಭ್ಯಗಳನ್ನು ಉಂಡಂತಹ ಜನಗಳು ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳದೆ ಇರುವುದು ಈ ಸಮಾಜದಲ್ಲಿ ಇರುವಂತಹ ಬಡವರ ಪರ ನಿಲ್ಲದೆ ಇರುವುದು ನಿಜಕ್ಕೂ ದುರ್ದೈವದ ಸಂಗತಿ ಹಾಗೆಯೇ ಬಂಜಾರ್ ಸಮಾಜದಲ್ಲಿ ಇನ್ನೂ ಹೆಚ್ಚು ಹೆಚ್ಚು ಸ್ವಾವಲಂಬಿ ಗಳಾಗಬೇಕು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ದಿಕ್ಕಿನಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಆಗುವ ಅಗತ್ಯತೆ ಇದೆ ಸಾಮಾಜಿಕ ಮೌಢ್ಯತೆಗಳನ್ನು ತೊರೆಯಬೇಕು ಕುಟುಂಬದ ಪ್ರತಿಯೊಂದು ಮಗುವಿಗೂ ಕೂಡ ಉನ್ನತ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವ ಜೊತೆಗೆ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರ್ ಆಶಯಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಣೆಗೊಳಿಸಬೇಕೆಂದು ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಾ ಸುಭಾಷ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನಮ್ಮ ರಾಜಣ್ಣ ಸಮಾಜದ ಮುಖಂಡರಾದ ಲಕ್ಷ್ಮಣ್ ನಾಯಕ್ ಕಲ್ಯಾಣ್ ಕುಮಾರ್ ಗ್ರಾಮ್ ಪಂಚಾಯ್ತಿ ಸದಸ್ಯ ಶಂಕರ್ ಮೂರ್ತಿ ಗ್ರಾಮ ಪಂಚಾಯತಿ ಸದಸ್ಯರಾದ ಕಾಟಯ್ಯ ಮುಂತಾದವರು ಉಪಸ್ಥಿತರಿದ್ದರು

