“ಮನೆ-ಮನೆಗೆ ದಿವ್ಯತ್ರಯರು‌ ಪ್ರಚಾರಾಂದೋಲನ ಕಾರ್ಯಕ್ರಮ”. ಚಳ್ಳಕೆರೆ:-ಚಳ್ಳಕೆರೆಯ ಶ್ರೀಶಾರದಾಶ್ರಮದ ವತಿಯಿಂದ ಮನೆ-ಮನೆಗೆ ದಿವ್ಯತ್ರಯರು ಪ್ರಚಾರಾಂದೋಲನ ಕಾರ್ಯಕ್ರಮವನ್ನು ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ “ಸಹ್ಯಾದ್ರಿ ನಿವಾಸ”ದಲ್ಲಿ ಆಯೋಜಿಸಲಾಗಿತ್ತು. ಈ ಸತ್ಸಂಗದ ಪ್ರಯುಕ್ತ “ಶ್ರೀರಾಮರಕ್ಷಾ ಸ್ತೋತ್ರ” ಪಾರಾಯಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ಲಕ್ಷ್ಮೀದೇವಮ್ಮ, ಬಿ.ಟಿ.ಗಂಗಾಂಬಿಕೆ, ಗಾಯತ್ರಿ, ಮೋಹಿನಿ,ತಿಪ್ಪಮ್ಮ ಉಮಾಶಂಕರ್, ವಸಂತಕುಮಾರಿ , ಗಿರಿಜಾ ಜಗದೀಶ್ , ಗೀತಾ ನಾಗರಾಜ್, ಯತೀಶ್ ಎಂ ಸಿದ್ದಾಪುರ, ಸುಜಾತ, ಪ್ರಿಯಾಂಕ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!