ಚಳ್ಳಕೆರೆ ತಹಶೀಲ್ದಾರ್ ಕಛೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ

ಚಳ್ಳಕೆರೆ: ಅನೇಕ ವರ್ಷಗಳಿಂದ ತುಳಿತಕ್ಕೆ ಹೊಳಗಾದ, ಹಾಗೂ ಶೋಷಿತ ವರ್ಗಕ್ಕೆ ಸೇರಿದ ಸವಿತಾ ಸಮಾಜ ಇಂದು ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ, ಪರಿವರ್ತನೆಯಾಗುವ ಸಂಕಲ್ಪ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.

ಅವರು ನಗರದ ತಹಶಿಲ್ದಾರ್ ಕಛೇರಿ ಸಭಾಂಗಣದಲ್ಲಿ ರಾಷ್ಟೀಯ ಹ್ಬಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತವತಿಯಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ತಳ ಸಮುದಾಯದವರು ಸ್ಥಿರವಾಗಿ ನಿಲ್ಲಬೇಕಾದರೆ, ಇಂತಹ ಮಹಾನಿಯರ ಜಯಂತಿಯನ್ನು ಆಚರಿಸುವುದರ ಮೂಲಕ ಸರ್ಕಾರವು ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ ಎಂದರು.

ಇಓ ಹೆಚ್.ಶಶಿಧರ್ ಮಾತನಾಡಿ, ಸಮುದಾಯದ ನಾಯಕರು ಪ್ರತಿಯೋಬ್ಬ ಸಮುದಾಯದ ಕುಂದು ಕೊರೆತೆಗಳನ್ನು ಹಾಗು ಕಷ್ಟಸುಖದಲ್ಲಿ ಬಾಗಿಯಾಗುದವುದರ ಮೂಲಕ ಸಮುದಾಯದವರನ್ನು ಮೇಲೆತ್ತುವ ಕೆಲಸ ಮಾಡಿದಾಗ ಮಾತ್ರ ಪರಿಪೂರ್ಣವಾಗಿ ಹೋರ ಹೊಮ್ಮುತ್ತಾರೆ. ಸಾಮಾಜಿಕ ಪರಿವರ್ತಿನೆಯಲ್ಲಿ ಕ್ರಾಂತಿ ಹುಟ್ಟು ಹಾಕಿ ಮಹನೀಯರು ಜಾತ್ಯತೀತ ನಿಮಾರ್ಣಕ್ಕೆ ಹೋರಾಟ ಮಾಡಿದ ಮಹನಿಯರಲ್ಲಿ ಸವಿತ ಮಹಿರ್ಷಿಯ ಒಬ್ಬರಾಗಿದ್ದರು ಎಂದರು.

ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಯಜ್ಙಯಾಗಾದಿಗಳನ್ನು ಮಾಡುವಾಗ ಮಹಿರ್ಷಿಗಳು, ಸಹ ಭಾಗವಹಿಸುತ್ತಿದರು. ಪವಿತ್ರವಾದ ಸಮುದಾಯವೆಂದರೆ ಸವಿತ ಸಮುದಾಯ. ಸವಿತ ಸಮುದಾಯದವರು ಮಧುವೆ ಕಾರ್ಯಕ್ರಮದಲ್ಲಿ ಮಂಗಳವಾದ್ಯ ನುಡಿಸೋದು, ಚಿಕ್ಕ ಮಕ್ಕಳಿಗೆ ಚೌರ(ತಲೆಕುದಲು) ತಗಿಸೋದಕ್ಕೆ, ಹಳ್ಳಿಯಲ್ಲಿ ಹಲವು ಖಾಯಿಲೆಗಳಿಗೆ ಮದ್ದುಕೋಡೊದಕ್ಕೆ ಹಲವಾರ ಮಂಗಳ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯ ಕಡ್ಡಾಯವಾಗಿ ಕೆಲಸ ಮಾಡುತ್ತಿದ್ದು. ಈ ಸಮುದಾಯವನ್ನು ಮುಖ್ಯವಾಹಿನಿಗೆ ಬರಬೇಕಿದೆ ಈ ಸಮುದಾಯ ಮುಖ್ಯವಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಮುಖ್ಯವಾಗಿ ಶಿಕ್ಷಣಬೇಕು ಎಂದರು.

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ ಮಾಲೀಕ್ ಸಾಬ್, ಉಪಾಧ್ಯಕ್ಷೆ ಸುಮಾ ಭರಮಯ್ಯ, ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ‌ ಅಧ್ಯಕ್ಷ ಎಂ.ಮಲ್ಲಿಕಾರ್ಜುನ, ಇತರರು ಇದ್ದರು.

About The Author

Namma Challakere Local News
error: Content is protected !!