ಚಳ್ಳಕೆರೆ :
ಚಿತ್ರದುರ್ಗ: ದುಷ್ಕರ್ಮಿಗಳಿಂದ ಜೋಗಿಮಟ್ಟಿ ಅರಣ್ಯಕ್ಕೆ
ಬೆಂಕಿ
ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತಿರುವ ಜೋಗಿ ಮಟ್ಟಿ
ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬೆಂಕಿಯಿಂದ ಅಪಾರ
ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ಜೋಗಿಮಟ್ಟಿ ಸಂರಕ್ಷತ
ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಶಂಕಿಸಲಾಗಿದೆ.
ಬೆಂಕಿಯಿಂದಾಗಿ ನೂರಾರು ಎಕರೆ ಅರಣ್ಯ ಸಂಪತ್ತು ಬೆಂಕಿಯ
ಕೆನ್ನಾಲಿಗೆಗೆ ಸುಟ್ಟು ಹೋಗಿದೆ. ಅರಣ್ಯದೊಳಗಿರುವ ಔಷಧಿ
ಸಸ್ಯಗಳು ಕೂಡ ಸುಟ್ಟು ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ
ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.