ಚಳ್ಳಕೆರೆ :
ರಾಷ್ಟ್ರೀಯ ರಸ್ತೆ ಸುರಕ್ಷತಾ ಅಂಗವಾಗಿ ಚಳ್ಳಕೆರೆ ನಗರದ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ನಡೆಸಿದರು.
ನಗರದ ಚಳ್ಳಕೆರೆ ಪೊಲೀಸ್ ಠಾಣೆ ಆವರಣದಿಂದ ನೂರಾರು ಪೊಲೀಸರು ಹೆಲ್ಮೆಟ್ ಧರಿಸುವ ಮೂಲಕ ನಾಗರಿಕರಿಗೆ ಬೈಕ್ ಜಾಗೃತಿ ಮೂಡಿಸಿದ್ದಾರೆ.
ಇನ್ನು ಬೈಕ್ ಜಾಥಕ್ಕೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಮಾತನಾಡಿದ್ದಾರೆ.
ಸಾರ್ವಜನಿಕರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಇದರಿಂದ ರಸ್ತೆ ಅಪಘಾತಗಳನ್ನು ಸಂಪೂರ್ಣವಾಗಿ ತಡೆಗಟ್ಟಿ ಸುಖಕ್ಕೆ ಕುಟುಂಬಕ್ಕೆ ನಾಂದಿ ಹಾಡಬಹುದು, ಸಡಕ್ ಸುರಕ್ಷಾ- ಜೀವನ ರಕ್ಷ, ರಸ್ತೆ ಸುರಕ್ಷತೆ ಜೀವದ ರಕ್ಷಣೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಪಿಎಸ್ಐ ಧರೇಪ್ಪ ಬಾಳಪ್ಪ , ಸಿಬ್ಬಂದಿ ವರ್ಗ ಇತರರು ಇದ್ದರು.


