filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಚಳ್ಳಕೆರೆ : ನಗರಸಭೆ ವ್ಯಾಪ್ತಿಗೆ ಒಳಪಡುವ ವಾಣಿಜ್ಯ ಮಳಿಗೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕರಪತ್ರ ಹರಿದಾಡುವುದನ್ನು ಇಂದು ನಗರಸಭೆ ಬಜೆಟ್ ಮಂಡನೆ ಸಭೆಯ ನಂತರ ಸದಸ್ಯೆ ಜಯಲಕ್ಷ್ಮಿ ಕರಪತ್ರವನ್ನು ಹಿಡಿದು ಸಭೆಯ ಗಮನಕ್ಕೆ ತಂದರು.

ನಮ್ಮ ನಗರಸಭೆಯ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ನಗರಸಭೆಯ ನಿರ್ಲಕ್ಷವೇ ಕಾರಣವಾಗಿದೆ ಎಂದು ಕರ ಪತ್ರದ ಮೂಲಕ ಆಯ್ಕೆಯಾಗಿ ಬಂದಂತಹ ಸದಸ್ಯರಿಗೂ ಹಾಗೂ ನಗರಸಭೆಗೆ ಮುಖಭಂಗವಾಗುವ ರೀತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಕರ ಪತ್ರ ಹರಿದಾಡುವುದು ನಗರಸಭೆ ನಿರ್ಲಕ್ಯಕ್ಕೆ ಕಾರಣವಾಗಿದೆ.

ಆದ್ದರಿಂದ ಅತಿ ತುರ್ತಾಗಿ , ನಗರಸಭೆ ತುರ್ತು ಸಭೆಯ ಮೂಲಕ ಕರಪತ್ರ ಕುರಿತಾದ ಕರಪತ್ರ ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆ ವ್ಯಾಪ್ತಿಗೆ ಒಳಪಡುವಂತಹ ವಾಣಿಜ್ಯ ಮಳಿಗೆಗಳ ಕ್ರಮವಹಿಸಬೇಕು ಎಂದು ಧ್ವನಿ ಎತ್ತಿದರು.

ಇದೇ ಸಂಧರ್ಭದಲ್ಲಿ ಸದಸ್ಯರು ಈ ಕೂಡಲೇ ತುರ್ತಾಗಿ ಸಭೆ ಕರೆದು ನಗರಸಭೆ ಮಾನ ಉಳಿಸಿ, ತುರ್ತು ಸಭೆಯಲ್ಲಿ ನಗರಸಭೆ ವಕೀಲರನ್ನು ಕರೆಯಿಸಿ, ಎಲ್ಲಾ ದಾಖಲಾತಿಗಳು ಇರುವಾಗೆ ಸಭೆಯಲ್ಲಿ ‌ನಿರ್ಣಯ ಕೈಗೊಳ್ಳಬೇಕು ಎಂದರು.

ಇದೇ ಸಂಧರ್ಭದಲ್ಲಿ ಅಧ್ಯಕ್ಷ ಜೈ ತುಂಬಿ ಮಾಲಿಕ್ ಸಾಬ್, ಉಪಾಧ್ಯಕ್ಷೆ ಸುಮ ಭರಮಯ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ. ಮಲ್ಲಿಕಾರ್ಜುನ, ಪೌರಾಯುಕ್ತ ಜಗರೆಡ್ಡಿ, ಸದಸ್ಯ ರಮೇಶ್ ಗೌಡ, ರಾಘವೇಂದ್ರ , ಕೆ.ವೀರಭದ್ರಯ್ಯ ,ಎಂ. ಜಯಣ್ಣ, ವೆಂಕಟೇಶ್, ಪ್ರಶಾಂತ್ ,ಹೊಯ್ಸಳ ಗೋವಿಂದರಾಜ್, ಕವಿತಾ, ಸುಜಾತ ಕವಿತಾ, ಹಾಗೂ ಸರ್ಕಾರದ ನಾಮ ನಿರ್ದೇಶನ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!