ಚಳ್ಳಕೆರೆ : ತಾಲೂಕಿನಾಧ್ಯಂತ ಶೂನ್ಯ ಮಾಸದ ಮಾರಮ್ಮ ಜಾತ್ರೆಗಳು ಅದ್ದೂರಿಯಾಗಿ ನಡೆದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಮಜುರೆ, ಕಾವೂಲಾರ ಹಟ್ಟಿ ಗ್ರಾಮದಲ್ಲಿ ಶೂನ್ಯದ ಮಾರಮ್ಮ ಜಾತ್ರೆಯನ್ನು ಸರ್ವ ಭಕ್ತಾದಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ.
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನನ್ನಿವಾಳ ಕಟ್ಟೆ ಮನೆಗೆ ಸೇರಿದ ಶ್ರೀ ಮುತ್ತಯಗಳ ಶೂನ್ಯದ ಮಹರಮ್ಮನ ಹಬ್ಬ ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

