ಪ್ರತಿಯೊಬ್ಬರೂ ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ನಿಮ್ಮ ಜೀವ ಉಳಿಸಿಕೊಳ್ಳಿ ಪಿಎಸ್ಐ ದೇವರಾಜ್.
ನಾಯಕನಹಟ್ಟಿ:: ಸಾರ್ವಜನಿಕರು ಬೈಕ್ ನಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂದು ಪಿಎಸ್ಐ ದೇವರಾಜ್ ಹೇಳಿದರು.
ಭಾನುವಾರ ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ “ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ” ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರಾಲಿ ಮಾಡುವುದರ ಮೂಲಕ ಹೆಲ್ಮೆಟ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ನಿಮ್ಮ ಜೀವನ ಮತ್ತು ನಿಮ್ಮ ಕುಟುಂಬವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಅದೇ ರೀತಿ ಮಧ್ಯಪಾನ ಮಾಡಿ ವಾಹನವನ್ನು ಚಲಾಯಿಸುವುದು ಅಪರಾಧ ಆದ್ದರಿಂದ ಯಾರೇ ಬೈಕ್ ಅನ್ನು ಚಲಾಯಿಸಿದರು ಕೂಡ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದರು.
ಇನ್ನೂ ಇದೇ ವೇಳೆ ಪಿಎಸ್ಐ -2 ಕೆ. ಶಿವಕುಮಾರ್ ಮಾತನಾಡಿದರು. ಪೊಲೀಸ್ ಇಲಾಖೆ ಎಷ್ಟು ಬಾರಿ ಈ ವಿಚಾರದಲ್ಲಿ ದಂಡ ಹಾಕಿದರೂ ಕೂಡ ಜನಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಆದ್ದರಿಂದ ದ್ವಿಚಕ್ರ ವಾಹನ ಸವಾರರು ನಿರ್ಲಕ್ಷ್ಯ ಮಾಡಿದಲ್ಲಿ ವಾಹನವನ್ನು ಸೀಜ್ ಮಾಡಲಾಗುತ್ತದೆ ಹೆಲ್ಮೆಟ್ ಧರಿಸುವುದರಿಂದ ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಬಹುದು ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಇನ್ನೂ ನಾಯಕನಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ಬೈಕ್ ರಾಲಿ ಪಟ್ಟಣದ ಪೊಲೀಸ್ ಠಾಣೆಯಿಂದ ವಾಲ್ಮೀಕಿ ವೃತ್ತ ಪಾದುಗಟ್ಟೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಅಂಬೇಡ್ಕರ್ ವೃತ್ತ ಬೀದಿಗಳಲ್ಲಿ ಸಂಚಾರ ಮಾಡುತ್ತ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಎಎಸ್ಐ ದಾದಾಪೀರ್, ಹೆಡ್ ಕಾನ್ಸ್ಟೇಬಲ್ ಮಂಜುನಾಥ್, ಹಾಲೇಶ್, ಸಿಬ್ಬಂದಿಗಳಾದ ಭಾಷಾ, ರಾಮಾಂಜನಿ, ಅಣ್ಣಪ್ಪ ನಾಯ್ಕ, ರಮೇಶ್, ತಿಮ್ಮೆಶ್ ,ಶ್ರೀಹರಿ, ರುದ್ರಪ್ಪ, ಲೋಹಿತ್ ,ಹನುಮಂತ್, ಪ್ರೇಮ ಕುಮಾರ್, ರಾಘವೇಂದ್ರ, ದೇವರಾಜ್ ಕೋಟೆ , ಉಪಸ್ಥಿತರಿದ್ದರು

