ಚಳ್ಳಕೆರೆ :
ಹೊಳಲ್ಕೆರೆ: ಭರಮಸಾಗರದ ಭರ್ಜರಿ ಕಾರ್ಯಾಚರಣೆ
ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ
ನಡೆಸಿ, ಅಂತರ ರಾಜ್ಯ ಕಳ್ಳರನ್ನು ಬುಧವಾರ ಬಂಧಿಸಿದ್ದಾರೆ.
ಹೊಳಲ್ಕೆರೆ ಕ್ಷೇತ್ರದ ಭರಮಸಾಗರ ಹಾಗು ಚಿತ್ರಹಳ್ಳಿ ಪ್ರಕರಣಗಳ
ಕೈಗೆತ್ತಿಕೊಂಡು ಆರೋಪಿಗಳನ್ನು ಹಾವೇರಿಯಲ್ಲಿ ಬಂಧಿಸಿದ್ದಾರೆ.
ಆರೋಪಿಗಳಿಂದ 78 ಗ್ರಾಂ ಚಿನ್ನ, 450 ಗ್ರಾಂ ಬೆಳ್ಳಿ ಹಾಗು 4
ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 11 ಲಕ್ಷದ 20
ಸಾವಿರ ಮೌಲ್ಯದ ವಸ್ತುಗಳಾಗಿವೆ ಎಂದು ಎಸ್ಪಿ ರಂಜಿತ್ ಕುಮಾರ್
ಬಂಡಾರು ತಿಳಿಸಿ, ಬಂಧಿಸಿದ ಪೊಲೀಸರನ್ನು ಶ್ಲಾಘಿಸಿದ್ದಾರೆ.

