ವರ್ಗಾವಣೆ ತರುವಾಯ ಪೋಷಣೆ ಅಧಿಕಾರಿಗಳದ್ದೆ
ಪರಿಸರ ಜಾಗೃತಿಗೆ ಅಧಿಕಾರಿಗಳು ದತ್ತು ಪಡೆದು ಸಸಿಗಳ ಪೋಷಣೆ


ರಾಮುದೊಡ್ಮನೆ


ಚಳ್ಳಕೆರೆ : ಬಯಲು ಸೀಮೆ ಎಂದರೆ ಎಂಥವರಿಗೂ ತಟ್ಟನೆ ನೆನಪಾಗುವುದು ಚಳ್ಳಕೆರೆ ಇಲ್ಲಿ ಕ್ಷಣಕ್ಷಣಕ್ಕೂ ಬಿಸಿಲ ಧಗೆಯು ಕಾವು ಹೆಚ್ಚಿ ಇದರ ಕಾವು ಪ್ರಾಣಿ ಸಂಕುಲಕ್ಕೆ ಬಡಿಯದೆ ಇರದು, ಇಂತಹ ಬರದ ನಾಡಿನಲ್ಲೂ ಅರಣ್ಯಕರಣ ಮಾಡುವುದು ಒಂದು ಸವಾಲೆ ಸರಿ.


ಆದರೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ನಿರಂತರವಾಗಿ ಗಿಡಗಳ ಬೆಳೆಸುವಿಕೆ ರೈತರಿಗೆ ನೀಡುವುದು ವಾಡಿಕೆಯಾಗಿದೆ. ಆದ್ದರಿಂದ ಈ ಬಾರಿ ಸುಮಾರು 1.50 ಲಕ್ಷಗಿಡಗಳ ನೆಡುವ ಗುರಿ ಹೊಂದಿದ್ದಾರೆ, ರೈತರಿಗೆ ಕೃಷಿ ಅರಣ್ಯ ಪ್ರೋತ್ಸಹ ಯೋಜನೆಯಡಿಯಲ್ಲಿ ಗಿಡಗಳನ್ನು ನೀಡಲಾಗುತ್ತಿದೆ,
ಈಗಾಗಲೇ ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಬಾಬು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಶಾಲಾ ಕಾಲೇಜು ಹಾಗೂ ಸರಕಾರಿ ಇಲಾಖೆಗಳ ಕಚೇರಿಗಳ ಆವರಣದಲ್ಲಿ ನಗರ ಹಸಿರೀಕರಣ ಯೋಜನೆಯಡಿಯಲ್ಲಿ ಗಿಡಗಳನ್ನು ಬೆಳೆಸಲು ಸಸಿಗಳನ್ನು ಉಚಿತವಾಗಿ ನೀಡುತ್ತಿದ್ದು, ಕೃಷಿ ಅರಣ್ಯ ಪ್ರೋತ್ಸಹ ಯೋಜನಡೆಯಡಿಯಲ್ಲಿ ರೈತರಿಗೆ ಸಾವಿರಾರು ವಿವಿಧ ಜಾತಿ ಹೆಬ್ಬೇವು, ಟೀಕ್, ಸಿಲ್ಲವರ್, ಹೊಂಗೆ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದಿದ್ದಾರೆ.

ಪ್ರೋತ್ಸವ ಧನ :
ಗಿಡಗಳನ್ನು ಪೋಷಣೆ ಮಾಡಲು ಮೂರು ವರ್ಷಗಳ ಪ್ರೋತ್ಸಹ ಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುವುದು, ರೈತರು ಪೋಷಣೆ ಮಾಡಿದ ಗಿಡಗಳನ್ನು ಲೆಕ್ಕಾ ಹಾಕಿ ಹಣವನ್ನು ನೀಡಲಾಗುವುದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತಮ್ಮ ಜಮೀನಿನ ಬದು ಹಾಗೂ ಪಾಳು ಭೂಮಿಯಲ್ಲಿ ಗಿಡಗಳನ್ನು ನೆಡಲು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಅರಣ್ಯ ಇಲಾಕೆಯಿಂದ ಬೃಹತ್ ಸಸಿ ನೆಡುವ ಕಾರ್ಯಕ್ರಮ ಪ್ರತಿವರ್ಷವೂ ಹಮ್ಮಿಕೊಂಡು, ಶಾಲೆ-ಕಾಲೇಜು, ಸರಕಾರಿ ಕಚೇರಿ, ಗ್ರಾಪಂ ಆವರಣ, ಸಾರಿಗೆ ಘಟಕ, ರಸ್ತೆ ಬದಿ ಸೇರಿದಂತೆ ಅರಣ್ಯ ಪ್ರದೇಶದಲ್ಲಿ 10 ಸಾವಿರ ಕ್ಕೂ ಹೆಚ್ಚು ಸಸಿಗಳನ್ನು ಹಾಕಲಾಗಿತ್ತು. ಈ ಬಾರಿ ಸಂಘ, ಸಂಸ್ಥೆಗಳು, ಸಾರ್ವಜನಿಕರಿಗೂ ಉಚಿತವಾಗಿ ÷ಬೇವು, ಕಾಡು ಬಾದಾಮಿ, ಅರಳಿ, ನೇರಳೆ, ಅಕೇಶಿಯ, ಸಂಪಿಗೆ, ಹಲಾ, ಹೊಂಗೆ, ತೇಗಾ, ಸಿಲ್ವಾರ್ ಹಲವಾರು ಜಾತಿಯ ಗಿಡಗಳನ್ನು ಬೆಳೆಸಿ ಶಾಲೆ, ಕಾಲೇಜು, ಸಂಘ, ಸಂಸ್ಥೆಗಳ, ರೈತರಿಗೆ ನೀಡಿದ ನಂತರ ಉಳಿಯುವ ಲಕ್ಷಾಂತರ ಸಸಿಗಳನ್ನು ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಡಲಾಗಿತ್ತು ಎಂಬ ಮಾಹಿತಿಯನ್ನು ಮೆಲಕು ಹಾಕಿದರು.

–ಟಿ.ರಘುಮೂರ್ತಿ ಶಾಸಕ ಚಳ್ಳಕೆರೆ ವಿಧಾನ ಸಭಾಕ್ಷೇತ್ರ


ಹೇಳಿಕೆ :
1… ಬಯಲು ಸೀಮೆಯನ್ನು ಹಸಿರುಕರಣ ಮಾಡಲು ಸರಕಾರಿ ಗೋಮಾಳ, ಪಾಳು ಬಿದ್ದ ಭೂಮಿಯನ್ನು ಆಯ್ಕೆ ಮಾಡಿಕೊಂಡು ಪ್ರತಿ ವರ್ಷ ಕೂಡ ಈ ಪರಿಸರ ದಿನಾಚರಣೆಯಂದು ಸಾವಿರಾರು ಗಿಟಗಳನ್ನು ನೆಟ್ಟು ಹಸಿರುಕರಣಕ್ಕೆ ಒತ್ತು ನೀಡಿದೆ ಆದರೆ ಈ ಬಾರಿ ಅಧಿಕಾರಿಗಳು ಸಸಿಗಳನ್ನು ದತ್ತು ಪಡೆಯುವುದು ವಿಶೇಷವಾಗಿದೆ ಆದ್ದರಿಂದ ಪ್ರತಿಯೊಬ್ಬರು ಮನೆಯ ಮಗುವಿನಂತೆ ಗಿಡಗಳನನ್ನು ಬೆಳೆಸಿದಾಗ ಮಾತ್ರ ನಮ್ಮ ಮಧ್ಯ ಕರ್ನಾಟಕದ ಬಯಲು ಸೀಮೆಯ ಎಂಬ ಹಣೆ ಪಟ್ಟಿ ಕಳಚುವುದು ಸತ್ಯ

ಎನ್.ರಘುಮೂರ್ತಿ ತಹಶೀಲ್ದಾರ್.

2..ಚಳ್ಳಕೆರೆ ಸುತ್ತಲೂ ಈಗಾಗಲೆ ಸುಮಾರು ನೂರಾರು ಎಕರೆ ಭೂ ಪ್ರದೇಶದಲ್ಲಿ ಪರಿಸರ ಉಳಿಸುವ ಉದ್ದೇಶದಿಂದ ಸಸಿಗಳನ್ನು ನೆಡಲು ಸಜ್ಜು ಮಾಡಿದೆ, ಆದ್ದರಿಂದ ಜೂ.10 ರಂದು ಸುಮಾರು 10 ಸಾವಿರ ಸಸಿ ನೆಡುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಪ್ರತಿಯೊಬ್ಬರಲ್ಲಿ ಪರಿಸರದ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಅಧಿಕಾರಿಗಳು ಸರಕಾರಿ ಇಂಜಿನಿಯಾರ್ ಕಾಲೇಜ್ ಆವರಣದಲ್ಲಿ ತಲಾ 50 ಸಸಿಗಳನ್ನು ದತ್ತು ಪಡೆದು ತಾನು ವರ್ಗಾವಣೆ ತರುವಾಯ ಕೂಡ ಸಸಿಗಳ ನಿರ್ವಾಣೆ ಹೋರುವ ಗುರುತರವಾದ ಜಾಬ್ದಾರಿ ಈ ಬಾರಿ ತಾಲೂಕಿನಲ್ಲಿ ಪರಿಸರ ದಿನಚರಣೆಯ ಮುಖ್ಯ ದ್ಯೇಯವಾಗಿದೆ.

-ವಲಯ ಅರಣ್ಯ ಅಧಿಕಾರಿ ಎಸ್.ಬಾಬು

3..ಪ್ರತಿ ವರ್ಷದಂತೆ ಈ ಬಾರಿ ಬೃಹತ್ ಪ್ರಮಾಣದಲ್ಲಿ ಗಿಡಗಳನ್ನು ಸಾರ್ವಜನಿಕರು ಕೊಂಡುಯ್ಯುತ್ತಿದ್ದಾರೆ ಆದ್ದರಿಂದ ಇಲಾಖೆಯಿಂದ ಸಸಿಗಳನ್ನು ಹಾಕಲು ಮತ್ತು ಬೆಳೆಸಲು ಪ್ರೋತ್ಸಹ ನೀಡುತ್ತಿದ್ದು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಸೂಚಿಸಿದ್ದು ರಸ್ತೆ ಬದಿ, ಹಾಗೂ ಶಾಲಾ ಆವರಣದಲ್ಲಿ ಬೆಳೆಸಲು ತಿಳಿಸಿದೆ.

About The Author

Namma Challakere Local News
error: Content is protected !!