” ರೈತರ ನಡೆ ಸಿರಿಗೆರೆ ಮಠದ ಕಡೆ” ಭದ್ರಾ ಮೇಲ್ದಂಡೆ ಯೋಜನೆಯ ಪೂರ್ವಭಾವಿ ಸಭೆ.

ನಾಯಕನಹಟ್ಟಿ: ಹೋಬಳಿ ಎಲ್ಲಾ ರೈತರು ಒಗ್ಗೂಡಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸಿರಿಗೆರೆ ಮಠದ ಸ್ವಾಮೀಜಿಗಳಿಗೆ ಮನವಿಯನ್ನು ಸಲ್ಲಿಸಲು ಪಕ್ಷಾತೀತವಾಗಿ ಕೈಜೋಡಿಸುವಂತೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನ ಗೌಡ್ರು ಕರೆ ನೀಡಿದರು.

ನಂತರ ಮಾತನಾಡಿದ ಅವರು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಯಶಸ್ವಿಗೊಳಿಸಲು ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿವಂತೆ ಮನವಿ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬೇಕಂದರೆ ಅದು ಸಿರಿಗೆರೆ ಸ್ವಾಮೀಜಿಯಿಂದ ಮಾತ್ರ ಸಾಧ್ಯ. ಆದ್ದರಿಂದ ಜ.13 ರಂದು ಜಾತಮೂಲಕ ತೆರಳಿ ಸ್ವಾಮೀಜಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು. ತುಳುಕು ಮತ್ತು ನಾಯಕನಹಟ್ಟಿ ಹೋಬಳಿಗಳಿಂದ ಎಲ್ಲಾ ಸಂಘಟನೆಗಳು ಕೈಜೋಡಿಸುವುದರ ಮೂಲಕ ಅತಿಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ರೈತ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು.

ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್ ರವಿಕುಮಾರ್ ಮಾತನಾಡಿ ಸಿರಿಗೆರೆ ಸ್ವಾಮಿಗಳ ಗಮನಕ್ಕೆ ತರದೆ ಇರುವುದರಿಂದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕುಂಠಿತವಾಗಿದೆ. ಸಿರಿಗೆರೆ ಸ್ವಾಮಿಗಳ ಗಮನಕ್ಕೆ ತರುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಯಾರು ವೈಯಕ್ತಿಕವಾಗಿ ಹೋಗುವುದು ಬೇಡ. ಹೋಬಳಿಯ ಎಲ್ಲಾ ಮುಖಂಡರು ಒಗ್ಗೂಡಿ ಹೋಗಿ ಮನವಿಯನ್ನು ಸಲ್ಲಿಸೋಣ. ಸ್ವಾಮಿಗಳು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎನ್ನುವ ಆಶಯವಿದೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಯಾವುದೇ ಸರ್ಕಾರ ಬಂದರೂ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿಲ್ಲ ನಮ್ಮ ಜಿಲ್ಲೆಯಿಂದ ಅತಿಹೆಚ್ಚಿನ ರೈತರನ್ನು ಒಗ್ಗೂಡಿಸಿ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಅಂದಾಗ ಮಾತ್ರ ನಮ್ಮ ಕನಸು ನನಸಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಪಿ ಓಬಯ್ಯ ದಾಸ್, ಎಂ ಟಿ ಮಂಜುನಾಥ್, ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕ ಸಿದ್ದಲಿಂಗಪ್ಪ ಗುಂತಕೋಲಮ್ಮನಹಳ್ಳಿ, ನಲಗೇತನಹಟ್ಟಿ ನಲ್ಲನ ದೊಡ್ಡಬೋರಯ್ಯ, ಜಿ ಎಸ್ ಮಂಜುನಾಥ್, ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ ಬೋರನಾಯಕ, ಎನ್ ಮಹದೇವಪುರ ಡಿ. ಬೋರಯ್ಯ, ಗುಂತಕೋಲಮ್ಮನಹಳ್ಳಿ ಎನ್ ತಿಪ್ಪೇಸ್ವಾಮಿ, ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ ಮುದಿಯಪ್ಪ, ಕಾರ್ಯಧ್ಯಕ್ಷ ಬೋರಸ್ವಾಮಿ, ಟಿ ಬಸಪ್ಪ ನಾಯಕ, ಎನ್. ದೇವರಹಳ್ಳಿ ಮಹಾಂತೇಶ್, ಅಬ್ಬೇನಹಳ್ಳಿ ಶಿವಪ್ರಕಾಶ್ ,ಗುಂತಕೋಲಮ್ಮನಹಳ್ಳಿ ಜಿ.ಎಂ. ಜಯಣ್ಣ, ರಾಮಸಾಗರ ಕಾಟಯ್ಯ, ಮಲ್ಲೂರಹಳ್ಳಿ ಕೆ.ಟಿ. ನಾಗರಾಜ್, ಬಿ. ಕಾಟಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಹೋಬಳಿ ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ. ನಿವೃತ್ತ ಸೈನಿಕ ಬೋಸೆರಂಗಪ್ಪ, ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.

About The Author

Namma Challakere Local News
error: Content is protected !!