ಮಲ್ಲೂರಹಳ್ಳಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಇರುಮುಡಿ ಪೂಜೆಯಲ್ಲಿ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಭಾಗಿ
ನಾಯಕನಹಟ್ಟಿ : ಹೋಬಳಿಯ ಮಲ್ಲೂರಹಳ್ಳಿ ಗ್ರಾಮದಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಇಡೀ ದಕ್ಷಿಣ ಭಾರತದಲ್ಲಿ ಅತ್ಯಂತ ಕಠಿಣವಾದಂತ ವ್ರತವನ್ನು ಆಚರಣೆ ಮಾಡುತ್ತಾರೆಂದು ನಿಕಟ ಪೂರ್ವ ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಶುಕ್ರವಾರ ಹೋಬಳಿಯ ಮಲ್ಲೂರಹಳ್ಳಿ ಗ್ರಾಮದ ಯುವಕರು ಹಮ್ಮಿಕೊಂಡಿದ್ದಂತ ಶ್ರೀ ಅಯ್ಯಪ್ಪ ಸ್ವಾಮಿ ಇರುಮುಡಿ ಪೂಜೆಯಲ್ಲಿ ಭಾಗವಹಿಸಿದ್ದರು.
ನಂತರ ಮಾತನಾಡಿದ ಅವರು ಭಾರತದ ಸನಾತನ ಸಂಸ್ಕೃತಿಯಲ್ಲಿ ಧರ್ಮ ಭಕ್ತಿ ಶ್ರದ್ಧೆ ಮತ್ತು ತ್ಯಾಗಕ್ಕೆ ಮತ್ತೊಂದು ಹೆಸರೇ ಮಣಿಕಂಠ ಅಯ್ಯಪ್ಪನ ಹೆಸರು 20ನೇ ಶತಮಾನದಲ್ಲಿ ಅತ್ಯುತ್ತ ಮಂಚೂಣಿಗೆ ಬಂದಿದ್ದು, ಅಲ್ಲಿಂದ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಸಂಖ್ಯೆ ಸಾಗರೋಪದಿಯಲ್ಲಿ ಏರಿಕೆ ಆಯಿತು. ನಿರಂತರ ಕಠಿಣ ವ್ರತದ ಮುಖಾಂತರ ಭಕ್ತಾದಿಗಳು ಅಯ್ಯಪ್ಪ ಸ್ವಾಮಿಗೆ ಇರುಮುದಿಯೊಂದಿಗೆ ಭಕ್ತಿಯನ್ನು ಸಮರ್ಪಣೆ ಮಾಡುತ್ತಾರೆ.
ಇವರ ಕಠಿಣ ವ್ರತಕ್ಕೆ ನಂಬಿಕೆಗೆ ಮತ್ತು ಭಕ್ತಿ ಶ್ರದ್ದೆಗೆ ಭಗವಂತನು ಒಲಿಯುತ್ತಾನೆ. ಎಂಬ ಪ್ರತಿತಿಯಿದೆ ಚಳ್ಳಕೆರೆ ತಾಲೂಕಿನ ಎಲ್ಲಾ ಸಾರ್ವಜನಿಕ ಬಾಂಧವರಿಗೆ ಇರುಮುಡಿ ಪೂಜೆ ಮುಖಾಂತರ ಮಣಿಕಂಠ ಸ್ವಾಮಿಯು ಒಲಿದು ಸಕಲ ಐಶ್ವರ್ಯ ಮತ್ತು ನೆಮ್ಮದಿ ಸಮಾಜದಲ್ಲಿ ಉಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು, ಊರಿನ ಗ್ರಾಮಸ್ಥರು ಹಾಜರಿದ್ದರು.

