ಚಳ್ಳಕೆರೆ :
ಚಿತ್ರದುರ್ಗ: ಕಳಪೆ ತೊಗರಿ ಬೀಜ ವಿತರಣೆ ರೈತರಿಂದ
ಆಕ್ರೋಶ
ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಅಲ್ಪಾವಧಿ ಮತ್ತು ಧೀರ್ಘಾವಧಿ
ಬೆಳೆ ಬೆಳೆಯುತ್ತಿದ್ದಾರೆ, ಶೇಂಗಾ, ಕಡಲೆ ರಾಗಿ ನವಣೆ ಸಜ್ಜೆ ತೊಗರಿ
ಬೆಳೆ ಹಾಕಿದ್ದಾರೆ.
ಆದರೆ ಕೃಷಿ ಇಲಾಖೆಯಿಂದ ವಿತರಿಸಿರುವ
ತೊಗರಿ ಬೀಜ ಕಳಪೆಯಾಗಿದೆ ಎಂದು ರೈತ ಸಂಘದ ಮುಖಂಡ
ಹೊರಕೇರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿಂದು ಡಿಸಿ
ಕಚೇರಿ ಬಳಿ ಮಾತನಾಡಿ, ರೈತರು ಬಿತ್ತುವಾಗ ಗೊತ್ತಾಗುವುದಿಲ್ಲ,
ಆದರೆ ಬೆಳೆದು ದೊಡ್ಡದಾದಾಗ ಅವುಗಳಲ್ಲಿ ಹೂವುಗಳಿಲ್ಲ ಕಾಳು
ಕಟ್ಟುತ್ತಿಲ್ಲ ಇದು ರೈತರಿಗಾದ ವಂಚನೆ ಎಂದರು.