ಚಳ್ಳಕೆರೆ : ಬಯಲು ಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರಗೋಳಿಸಲು ಇದೇ
ಜನವರಿ 13 ನೇ ಸೋಮವಾರ ಮಧ್ಯಾಹ್ನ 1 ಗಂಟೆಗೆ
ಶ್ರೀ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ತರಳಬಾಳು ಬೃಹನ್ಮಠ, ಸಿರಿಗೆರೆ, ಚಿತ್ರದುರ್ಗ ತಾಲ್ಲೂಕು ಇವರ ಸನ್ನಿಧಾನಕ್ಕೆ
“ಸಾವಿರಾರು ರೈತರು ಜಾತಾದೊಂದಿಗೆ ಶ್ರೀಮಠಕ್ಕೆ ಆಗಮಿಸಿ ಗುರುಗಳಿಗೆ ರೈತರಿಂದ
‘ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರಗೋಳಿಸಲು ಹಾಗೂ
ಕೈಬಿಟ್ಟ ಕೆರೆಗಳಿಗೆ ನೀರು ತುಂಬಿಸಲು ರೈತರ ನಡೆ ಸಿರಿಗೆರೆ ಮಠದ ಕಡೆ” ಎಂಬ ವಿನೂತನ ಕಾರ್ಯವನ್ನು ರೈತ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡಿದ್ದೆವೆ ಎಂದು ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ
ರಾಜ್ಯ ರೈತ ಸಂಘ
ಹಾಗೂ
ಹಸಿರು ಸೇನೆ ಒಕ್ಕೂಟ ಹಾಗೂ
ಎಲ್ಲಾ ಪ್ರಗತಿ ಪರ ರೈತ ಸಂಘಟನೆಗಳು ಚಿತ್ರದುರ್ಗ ಜಿಲ್ಲೆ
(ಜಾತ್ಯತೀತ, ಪಕ್ಷಾತೀತ, ಚುನಾವಣೆರಹಿತ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಚಿತ್ರದುರ್ಗ ಜಿಲ್ಲೆಗೆ ವರದಾನವಾಗಿರುವ ಭದ್ರಾಮೇಲ್ದಂಡೆ ಯೋಜನೆ ಜಾರಿಯಾಗಿ ದಶಕಗಳೇ ಕಳೆದರು, ಕಾಮಗಾರಿ
ಆಮೆಗತಿಯಲ್ಲಿ ಸಾಗಿದ್ದು ರೈತರ ನೀರಾವರಿ ಕನಸ್ಸು ಕನಸ್ಸಾಗಿಯೇ ಉಳಿದಿದೆ ಎಂದು ಆಕ್ರೋಶ ಹೊರಹಾಕಿದರು.
ಇನ್ನೂ ದೊಡ್ಡಉಳ್ಳಾರ್ತಿ ಕರಿಯಣ್ಣ ಮಾತನಾಡಿ,
ಜಿಲ್ಲಾರಾಜಕಾರಣಿಗಳ ಹಾಗೂ ಅಧಿಕಾರ
ಶಾಹಿಯ ದಿವ್ಯ ನೀರ್ಲಕ್ಷ್ಯದಿಂದ ರೈತರಿಗೆ ಭ್ರಮನಿರಸನವಾಗಿದೆ, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಾಟಕ್ಕೆ ಬಲಿಯಾಗಿ
ಪಕ್ಷರಾಜಕಾರಣಕ್ಕೆ ಸ್ವಾರ್ತ ರಾಜಾಕಾರಣಕ್ಕೆ ಈ ನೀರವರಿ ಯೋಜನೆಯ ಬಗ್ಗೆ ರೈತರಲ್ಲಿ ಆತಂಕ ಮನೆಮಾಡಿದೆ ಎಂದರು.
ಮುಖಂಡ ಸಿವೈ ಶಿವರುದ್ರಪ್ಪ ಮಾತನಾಡಿ,
ಕೇಂದ್ರ ಸರ್ಕಾರ
ಆಯ-ವ್ಯಯದಲ್ಲಿ ಘೋಷಿಸಿದ ಹಣ ಬಿಡುಗಡೆ ಮಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರೋಪ ಮತ್ತು ಪ್ರತ್ಯರೋಪಕ್ಕೆ
ರೈತರ ಬಲಿ, ಜಿಲ್ಲೆಯ ರೈತರು ದಶಕಗಳಿಂದಲೂ ಭೀಕರ ಬರಗಾಲಕ್ಕೆ ತುತ್ತಾಗಿ ರೈತರ ಬೆಳೆಗಳು, ನಾಶವಾಗಿ ಅತ್ಮಹತ್ಯೆಯಂತಹ
ಅಘಾತಕಾರಿ ನಿರ್ಧರಕ್ಕೆ ಅನೇಕ ರೈತರ ಜೀವಗಳು ಬಲಿಯಾಗಿ ಹೆಂಡತಿ ಮಕ್ಕಳ ಬದುಕಿಗೆ ಈ ಸ್ಥಿತಿ ಮಾರಕವಾಗಿದೆ ಅದರೂ
ರೈತರು ಛಲ ಬೀಡದೆ ಸಾಲ ಶೂಲ ಮಾಡಿ ತೋಟ ಮತ್ತು ಎಲ್ಲಾ ಬೆಳೆಗಳನ್ನು ಉಳಿಸಿ ಕೊಳ್ಳಲು 1000 ಅಡಿಯಿಂದ 1500
ಬೋರ್‌ವೆಲ್ ಕೊರೆಸಿದರು ನೀರು ಇಲ್ಲದೆ ಬೆಳಗಳು ಒಣಗಿ ರೈತರ ಬದುಕು ದುಸ್ತರವಾಗಿದೆ ಎಂದರು
ಮುಖಂಡ ನಿಜಲಿಂಗಪ್ಪ ಮಾತನಾಡಿ, ಬಯಲು ಸೀಮೆಯ ಜನರು ಟ್ಯಾಂಕರ್ ಮೂಲಕ ಲಕ್ಷಾಂತರ
ಖರ್ಚು ಮಾಡಿ ನೀರು ಒದಗಿಸಿದರೂ ಕೈಗೆ ಬಂದ ಬೆಳೆಗೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದರೂ ರಾಜಕೀಯ ಪಕ್ಷಗಳ
ನೀರ್ಲಕ್ಷದಿಂದ ನೀರಾವರಿ ಯೋಜನೆ ರೈತರಿಗೆ ಒದಗಿಸಿದೆ ಕೇವಲ ಚುನಾವಣೆಯಲ್ಲಿ ಮತಕ್ಕಾಗಿ ಹಣ ಹಂಚಿ ಅಧಿಕಾರಕ್ಕೆ ಬಂದು
ಆಶ್ವಾಸನೆಗಳು ಇಡೇರಿಸದೆ ಕಾಲ ಕಳೆಯುತ್ತಿದ್ದಾರೆಜಿಲ್ಲೆಯ ನೊಂದ ರೈತರು ರಾಜಕಾರಣಿಗಳ ಬಗ್ಗೆ ಗೌರವ ನಂಬಿಕೆ
ಕಳೆದುಕೊಂಡಿದ್ದಾರೆ. ಇದನ್ನು ಅರಿತ ಶ್ರೀ ಮಠವು ರೈತರ ಬದುಕನ್ನು ಹಸನುಗೊಳಿಸಲು ಕೆರೆ ತುಂಬಿಸುವ ಅದ್ಭುತ ಕಾರ್ಯವನ್ನು
ಮಾಡಿದ್ದಾರೆ ಶ್ರೀ ಮಠವು ರೈತರನ್ನು ಉಳಿಸಿ ಸ್ವಾಭಿಮಾನದಿಂದ ರೈತರನ್ನು ಬದುಕಿಸಿ ಕೊಳ್ಳಲು ರೈತರಿಗೆ ಅಗತ್ಯವಾದ ನೀರಿನ
ಸೌಲಭ್ಯ ಕಲ್ಪಿಸಲು ಸರ್ಕಾರಗಳೊಂದಿಗೆ ಸಮಾಲೋಚಿಸಿ ನೂರಾರು ಕೆರೆಗಳಿಗೆ ನೀರಿನ ಸೌಲಭ್ಯಒದಗಿಸಿ ಕೆರೆಗಳನ್ನು ತುಂಬಿಸಿ
ರೈತರ ಮೊಗದಲ್ಲಿ ಸಂತಸ ಕಂಡಿದ್ದಾರೆ ಈ ಜಿಲ್ಲೆಯ ನೀರಾವರಿ ಭಗೀರಥ ಸಿರಿಗೆರೆ ಮಠದ ಶ್ರೀ ಗಳೆಂದು ರೈತರ
ಮನದಲ್ಲಿ ಮನೆಮಾಡಿದೆ ಆದ್ದರಿಂದ ಶ್ರೀ ಮಠವು ಜಿಲ್ಲೆಯಲ್ಲಿ ದಶಕಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ
ಕಾಮಗಾರಿಗೆ ವೇಗ ಕೊಡುವಂತೆ ಜಿಲ್ಲೆಯಲ್ಲಿ ನೀರುಣ್ಣಿಸುವ ಕಾರ್ಯದಲ್ಲಿ ಕೈ ಬಿಟ್ಟಿರುವ ಕೆರೆಗಳನ್ನು ಸೇರ್ಪಡೆ ಮಾಡಿ ನೀರು
ಕೊಡುವಂತೆ ಬಿಟ್ಟಿರುವ ಕೆರೆಗಳನ್ನು ಸೇರಿಸಬೇಕು ಎಂದರು.
ಸರ್ಕಾರದಿಂದ ಜಿಲ್ಲೆಯ ರೈತರಿಗೆ ಬೇಕಾಗಿರುವ ಸೌಲಭ್ಯಗಳು
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರೂ. 5300 ಕೋಟಿ ಆಗತ್ಯ ಹಣ ಬಿಡುಗಡೆ ಮಾಡಿ ವೇಗ ನೀಡಬೇಕು,
ಯೋಜನೆಯಲ್ಲಿ ಬಿಟ್ಟಿರುವ ಕೆರೆಗಳಿಗೆ ನೀರು ತುಂಬಿಸಬೇಕು
ರಾಜ್ಯ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ (ಕರೆನ್ಸಿ) ಮೀಟರ್ ಅಳವಡಿಕೆಗೆ ಪ್ರಯತ್ನ ಮಾಡುತಿದ್ದು ಇನ್ನು
ಮುಂದೆ ಒಬ್ಬ ರೈತನಿಗೆ ಒಂದೇ ಪಂಪ್‌ಸೆಟ್‌ಗೆ ಅವಕಾಶವಿದ್ದು ಹೆಚ್ಚುವರಿ ಪಂಪ್‌ಸೆಟ್‌ಗಳು ಹಾಕಿಸಿಕೊಳ್ಳಬೇಕಾದರೆ,
ರೈತರು ಸ್ವಂತ ಹಣದಿಂದ ಮೀಟರ್ ಹಾಕಿಸಿಕೊಳ್ಳಬೇಕಾಗುತ್ತದೆ, ಈ ರೈತ ವಿರೋಧಿನೀತಿಯನ್ನು ಸರ್ಕಾರ ವಾಪಾಸ್ಸು
ಪಡೆಯಬೇಕು, ಹಿಂದಿನಂತೆ ರೈತರಿಗೆ ವಿದ್ಯುತ್ ಪೂರೈಕೆ ಮಾಡಬೇಕು.
ಜಿಲ್ಲೆಯಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆ ಹಿರಿಯೂರಿನಲ್ಲಿದ್ದು ರೈತರಿಗೆ ನೀರಿಲ್ಲದೆ ಕಬ್ಬು ಬೆಳೆಯುವುದನ್ನು ನಿಲ್ಲಿಸಿದ್ದರು.
ಈಗ ವಾಣಿವಿಲಾಸ ಸಾಗರ ತುಂಬಿರುವುದರಿಂದ ಜಿಲ್ಲೆಯಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸ
ನೆಡಯುತ್ತಿರುವುದರಿಂದ ರೈತರು ಆರ್ಥಿಕ ಬೆಳೆಯಾಗಿ ಕಬ್ಬು ಬೆಳೆಯುತ್ತಾರೆ .ಆದರಿಂದ ನಿಲ್ಲಿಸಿರುವ ಸಕ್ಕರೆ
ಕಾರ್ಖಾನೆಯನ್ನು ಪುನರಾರಂಬಿಸಬೇಕು.
ರಾಜ್ಯದ ಉತ್ತರ ಮತ್ತು ದಕ್ಷಣ ಬಾಗದ ಕೃಷ್ಣ ಮತ್ತು ಕಾವೇರಿ ಯೋಜನೆಗಳನ್ನು ಸರ್ಕಾರ ನಿಗಧಿತ ಅವಧಿಯಲ್ಲಿ
ಕಾಮಗಾರಿ ಪೂರೈಸಿ ನೀರವಾರಿ ಸೌಲಭ್ಯ ಒದಗಿಸಿದ್ದು ಇದೇ ವೇಗವನ್ನು ಮಧ್ಯ ಕರ್ನಾಟಕದ ಭದ್ರಾ ಮೇಲ್ದಂಡೆ
ನೀಡದೆ ಮಲತಾಯಿದೋರಣೆ ತೋರುತ್ತಿದ್ದು ತಕ್ಷಣವೇ ಈ ಯೋಜನೆಗೆ ಹಣಕಾಸು ಬಿಡುಗಡೆ ಮಾಡಿ ನಿಗದಿತ
ಸಮಯದಲ್ಲಿ ನೀರಾವರಿ ಸೌಲಭ್ಯ ಕೊಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ , ಆರ್ ಬಿ ನಿಜಲಿಂಗಪ್ಪ, ಹಿರೇಹಳ್ಳಿ ತಿಪ್ಪೇಸ್ವಾಮಿ, ಮಂಜಣ್ಣ, ಬೇಡ ರೆಡ್ಡಿಹಳ್ಳಿ ಪ್ರಶಾಂತ್ ರೆಡ್ಡಿ, ಮಲ್ಸಮುದ್ರ, ಗಂಗಾಧರ್, ಚಂದ್ರಶೇಖರ್ ನಾಯ್ಕ, ಓ ಟಿ ತಿಪ್ಪೇಸ್ವಾಮಿ, ಹೊನ್ನೂರು ಶ್ರೀನಿವಾಸ್, ಹಂಪಣ್ಣ, ತಳಕು ಮಲ್ಲೇಶಪ್ಪ, ವಲಸೆ ರುದ್ರಪ್ಪ, ತಿಪ್ಪೇಸ್ವಾಮಿ, ರುದ್ರ ನಾಯಕ , ಪ್ರಗತಿರ ರೈತ ಗುಡಿಹಳ್ಳಿ ರಂಗಣ್ಣ, ಮಹಿಳಾ ಮುಖಂಡರಾದ ಪದ್ಮಾವತಿ ಇತರರು ಹಾಜರಿದ್ದರು