ಚಳ್ಳಕೆರೆ :
ವೈಕುಂಠ ಏಕಾದಶಿ ಪ್ರಯುಕ್ತ ನಗರದಲ್ಲಿ ಶ್ರೀ ತಿಮ್ಮಪ್ಪ ಸ್ವಾಮಿ ದರ್ಶನಕ್ಕೆ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಮುಂಜಾನೆಯೇ ದೇವರ ದರ್ಶನ ಪಡೆದರು.
ಅದರಂತೆ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ಹಾಗೂ ಹಲವು ಕಾಂಗ್ರೆಸ್ ಮುಖಂಡರು ಗಾಂಧಿನಗರದ ತಿಮ್ಮಪ್ಪ ದೇವಸ್ಥಾನ ಹಾಗೂ ಹಳೆ ನಗರದ ಶ್ರೀ ತಿರುಪತಿ ತಿಮ್ಮಪ್ಪ ದೇವಸ್ಥಾನ , ಬೆಳಗಟ್ಟ ತಿಮ್ಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಹಳೆನಗರದ ತಿಮ್ಮಪ್ಪ ಭಕ್ತಾಧಿಗಳಾದ ಜಯಣ್ಣ, ಮಾರಣ್ಣ, ,
ನಗರಸಭೆ ಸದಸ್ಯರಾದ ರಮೇಶ್ ಗೌಡ, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ಹಳೆನಗರದ ವೀರಭದ್ರಪ್ಪ,, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಹಾಗೂ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.