ಚಳ್ಳಕೆರೆ : ಸಮಾಜದಲ್ಲಿ ಎಲ್ಲಾರಂತೆ ತಾವು ಕೂಡ ಇರಲು ಕಣ್ಣಿನ ಅಗತ್ಯತೆ ತುಂಬಾ ಇದೆ ಆದ್ದರಿಂದ ಕಣ್ಣಿನ ರಕ್ಷಣೆ ತುಂಬಾ ಮುಖ್ಯ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವೈಶಾಲಿ ಹೇಳಿದರು.
ನಗರದ ಸರಕಾರಿ
ನೌಕರರ ಭವನದ ಸಭಟಂಗಣದಲ್ಲಿ ಸೋಮವಾರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ
ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದ
ವತಿಯಿಂದ ಹಮ್ಮಿಕೊಂಡಿದ್ದ “ಹಿರಿಯ ನಾಗರಿಕರಿಗೆ
“ಉಚಿತ ನೇತ್ರ ತಪಾಸಣಾ ಶಿಬಿರ” ಉದ್ಘಾಟಿಸಿ
ಮಾತನಾಡಿದರು.
ನೇತ್ರದಾನ ಮಹಾದಾನ ಎನ್ನುವುದಕ್ಕಿಂತಲೂ ದೃಷ್ಠಿದಾನ
ಮಹಾದಾನ. ಪ್ರತಿಯೊಬ್ಬರು ದೃಷ್ಠಿದಾನ ಮಾಡಬಹುದು.
ಕಣ್ಣಿನ ತೊಂದರೆ ಇರುವ ತಮ್ಮ ನೆರೆ-ಹೊರೆಯ ಹಿರಿಯ
ನಾಗರಿಕರನ್ನು ನೇತ್ರ ತಪಾಸಣಾ ಶಿಬಿರಗಳಿಗೆ
ಕರೆದುಕೊಂಡು ಬರುವ ಮೂಲಕ ತಾವು ಸಹ ದೃಷ್ಠಿದಾನ
ಮಾಡಬಹುದು ಎಂದು ತಿಳಿಸಿದ ಅವರು, ಕಣ್ಣಿನ
ತೊಂದರೆ ಇರುವವರು ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆಗೆ
ಒಳಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು
ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ
ಮಾಡಿದರು.
ನಗರದ ಜಿಲ್ಲಾ ಅಂದತ್ವ ನಿವಾರಣಾಧಿಕಾರಿ
ಡಾ.ನಾಗರಾಜ್ ಮಾತನಾಡಿ,ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದು
ಅದರಲ್ಲೂ ವಿಶೇಷವಾಗಿ ವಯೋವೃದ್ಧರೇ ಹೆಚ್ಚಿನ
ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ನಿತ್ಯ
ಜೀವನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ
ಅನುಕೂಲ ಕಲ್ಪಿಸಲು ಉಚಿತ ಶಿಬಿರವನ್ನು
ಆಯೋಜಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ
ಪಡೆದುಕೊಳ್ಳುವಂತೆ ಜಿಲ್ಲಾ ಅಂದತ್ವ ಎಂದರು.
ಮುಪ್ಪು ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರಲಿದೆ.
ವಯಸ್ಸಾದಂತೆ ನಮ್ಮ ದೇಹವು ಅನೇಕ ಸಮಸ್ಯೆಗಳಿಗೆ
ಒಳಗಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಕಣ್ಣುಗಳು ಅತೀ
ಅವಶ್ಯಕ. ಇಲಾಖೆ ವತಿಯಿಂದ ಇದೇ ಪ್ರಥಮ ಬಾರಿಗೆ
ನೇತ್ರ ತಪಾಸಣೆ ಶಿಬಿರ ಏರ್ಪಡಿಸಿ, ಶಸ್ತ್ರಚಿಕಿತ್ಸೆಗೆ ಅವಕಾಶ
ಇಲ್ಲಿ ಸಿದ್ದು, ಹಿರಿಯ ನಾಗರಿಕರ ಅನುಕೂಲಕ್ಕಾಗಿ ಜಿಲ್ಲೆಯ
ಎಲ್ಲ ತಾಲ್ಲೂಕುಗಳಲ್ಲಿಯೂ ತಪಾಸಣಾ ಶಿಬಿರ
ಏರ್ಪಡಿಸಲಾಗಿದೆ ಎಂದರು.
ಮನೆಗೆ ಹಿರಿಯರು ಆಸ್ತಿ ಇದ್ದಂತೆ. ಹಿರಿಯ ನಾಗರಿಕರು
ನಿಯಮಿತವಾಗಿ ಆರೋಗ್ಯ ತಪಾಸಣಾ ಮಾಡಿಕೊಂಡು
ಪೌಷ್ಠಿಕಾಂಶ ಆಹಾರ ಸೇವಿಸುವ ಮೂಲಕ ಉತ್ತಮ
ಆರೋಗ್ಯ ಕಾಪಾಡಿಕೊಂಡು ಧೀರ್ಘಾಯುಷ್ಯಗಳಾಗಿ
ಬದುಕಬೇಕು ಎಂದು ಆಶಯವ್ಯಕ್ತಪಡಿಸಿದರು.
2024-25ನೇ ಸಾಲಿನಲ್ಲಿ ಹಿರಿಯ ನಾಗರಿಕರ
ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ವಿಶೇಷ ಅಭಿಯಾನ
ಯೋಜನೆಯನ್ನು ಘೋಷಿಸಿದ್ದು, ಮಾರ್ಗಸೂಚಿಯನ್ವಯ
ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ
ನೀಡಿ, ಸರ್ಕಾರ ಆದೇಶಿಸಿದೆ. ಅದರಂತೆ ಆರೋಗ್ಯ
ಇಲಾಖೆಯೊಂದಿಗೆ ಸಮನ್ವಯಿಸಿ ಎಲ್ಲ
ತಾಲ್ಲೂಕುಗಳಲ್ಲಿಯೂ ಹಿರಿಯ ನಾಗರಿಕರಿಗೆ ಪ್ರತಿ ವರ್ಷ
2 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರಗಳನ್ನು
ಆಯೋಜಿಸಬೇಕಾಗಿರುತ್ತದೆ. ಆದ್ದರಿಂದ ಪ್ರಥಮ
ಹಂತದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಹಿರಿಯ
ನಾಗರಿಕರಿಗೆ ಕಣ್ಣಿನ ಪೊರೆ ಚಿಕಿತ್ಸೆಗಾಗಿ ಪೂರ್ವಭಾವಿ
ಶಿಬಿರಗಳನ್ನು ಇದೇ ಜ.03 ರಿಂದ 10 ರವರಗೆ ಪ್ರತಿ
ತಾಲೂಕು ಕಮದ್ರದಲ್ಲಿ ಆಯೋಜನೆ ಮಾಡಲಾಗುತ್ತಿದೆ
ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೇತ್ರ ತಜ್ಞೆ
ಡಾ.ಶಿಲ್ಪ.ನೇತ್ರಾಧಿಕಾರಿಗಳಾದ ಪಂಚಜನ್ಯ. ಆಶಾ.ನವೀನ್
ಕುಮಾರ್, ವಿಕಲಚೇತನ ಸಂಯೋಜಕರು ಇತರ ಸಾರ್ವಜನಿಕರು,ಹಾಗೂ ಇತರರಿದ್ದರು.