ಚಳ್ಳಕೆರೆ :
ಚಿತ್ರದುರ್ಗ: ತೊಗರಿ ಗಿಡಗಳ ಹೊತ್ತು ಪ್ರತಿಭಟಿಸಿದ
ರೈತರು
ಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜವನ್ನು ರೈತರು ಖರೀದಿಸಿ
ಬಿತ್ತನೆ ಮಾಡಿ ಸುಮಾರು 6-7 ತಿಂಗಳಾದರು ಇದುವರೆಗೂ
ಹೂವು ಕಾಯಿ ಕಟ್ಟಿಲ್ಲ.
ರೈತರು 1 ಎಕರೆಗೆ ಸುಮಾರು 35-40
ಸಾವಿರ ಹಣ ಖರ್ಚು ಮಾಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟ
ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ
ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತರು ತೊಗರಿ ಗಿಡಗಳನ್ನು
ಹೊತ್ತು ಇಂದು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
ನಡೆಸಿದರು.