ಚಳ್ಳಕೆರೆ :
ಚಿತ್ರದುರ್ಗ: ಅಮಿತ್ ಶಾರನ್ನು ವಜಾಗೊಳಿಸಿ
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂಪುಟದಿಂದ
ವಜಾಗೊಳಿಸುಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್
ಪಕ್ಷದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ
ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ವೃತ್ತದವರೆಗೆ
ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು
ಅಮಿತ್ ಶಾ ವಿರುದ್ದ ಘೋಷಣೆ ಹಾಕಿದರು.
ಅಂಬೇಡ್ಕರ್
ಅವರಿಗೆ ಅಪಮಾನ ಮಾಡಿದ್ದು ಸರಿಯಲ್ಲ ಆದ್ದರಿಂದ ಕೂಡಲೇ
ಕ್ಷಮೆಯಾಚಿಸಬೇಕೆಂದರು.