“ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳು ಬದುಕಿಗೆ ದಾರಿದೀಪ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿ ಅವರು ಪ್ರತಿಪಾದಿಸಿದ ಸಂದೇಶಗಳು ನಮ್ಮ ಬದುಕಿಗೆ ದಾರಿದೀಪ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು..
ವಾಲ್ಮೀಕಿ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗಿರಿಜಾ ಜಗದೀಶ್ ಅವರ ಸ್ವಗೃಹದಲ್ಲಿ ಶ್ರೀಮಾತೆ ಶಾರದಾದೇವಿ ಅವರ 172ನೇ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ “ಮನೆ-ಮನೆಗೆ ಶಾರದಾಮಾತೆ ಪ್ರಚಾರಾಂದೋಲನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಅವತಾರ ಪುರುಷ ಶ್ರೀರಾಮಕೃಷ್ಣರ ಧರ್ಮಪತ್ನಿ ಶ್ರೀಮಾತೆ ಶಾರದಾದೇವಿ ಅವರ ಜೀವನ ಮತ್ತು ಸಂದೇಶಗಳು ಆಧುನಿಕ ಜಗತ್ತಿನ ಜನರ ಬದುಕಿಗೆ ಪ್ರಸ್ತುತವಾಗಿದ್ದು ಅವುಗಳನ್ನು ಮನೆ-ಮನೆಗಳಿಗೆ ತಲುಪಿಸಬೇಕಾಗಿದೆ ಎಂದು ತಿಳಿಸಿದರು.
ಶ್ರೀಮಾತೆ ಶಾರದಾದೇವಿ ಅವರ ಮಾತೃವಾತ್ಸಲ್ಯವು ವಿಶ್ವವ್ಯಾಪಕವಾಗಿದ್ದು ಅವರು ಮಾತೃತ್ವದ ಆದರ್ಶವಾಗಿದ್ದಾರೆ, ಅವರ ಆಧ್ಯಾತ್ಮಿಕ ಜೀವನವು ಪರಮಪವಿತ್ರತೆಯಿಂದ ಕೂಡಿದ್ದು ಅವರ ಸದಾ ಕರ್ಮಶೀಲತೆಯು ಸಮಾಜಕ್ಕೆ ಬಹುದೊಡ್ಡ ಸಂದೇಶವಾಗಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿ “ಶಾರದಾದೇವಿ ಅವರ ಜೀವನ ಮತ್ತು ಸಂದೇಶಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ಕನ್ನಡದಲ್ಲಿ ಬರೆದಿರುವ “ಶ್ರೀಶಾರದಾದೇವಿ ಜೀವನಗಂಗಾ” ಪುಸ್ತಕವನ್ನು ನಿತ್ಯವೂ ಓದುವ ಮತ್ತು ಅವುಗಳಲ್ಲಿರುವ ಸಂದೇಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ಹಾಗೂ ಶ್ರೀಮಾತೆ ಶಾರದಾದೇವಿ ಅವರ ಜಯಂತಿಯ ಪ್ರಯುಕ್ತ ಅವರ ಹೆಸರಿನಲ್ಲಿ ಕೇಕ್ ಕತ್ತರಿಸಿ,ಪ್ರಸಾದ ವಿನಿಯೋಗ ನಡೆಸಲಾಯಿತು.
ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಲಕ್ಷ್ಮೀದೇವಮ್ಮ ಸರ್ಪಭೂಷಣ, ಪ್ರೇಮಲೀಲಾ, ಸರಸ್ವತಮ್ಮ, ತೇಜಸ್ವಿನಿ ಅಭಿಲಾಷ್,ಹನ್ವಿಕ, ಶೈಲಜ ರುದ್ರಮುನಿಯಪ್ಪಾ, ಗಿರಿಜಾ ಜಗದೀಶ್.ವಿಶಾಲಾಕ್ಷಿ ಪುಟ್ಟಣ್ಣ , ಟಿ.ಎಂ.ವಿಜಯಕಲಾ,ಪಂಕಜ ಚೆನ್ನಪ್ಪ, ರತ್ನಮ್ಮ , ವಿಜಯಲಕ್ಷ್ಮೀ , ಸುಮನ ಕೋಟೇಶ್ವರ , ರಶ್ಮಿ ರಮೇಶ್ , ವಸಂತಕುಮಾರಿ, ಗೀತಾ ನಾಗರಾಜ್ , ಗಂಗಾಂಬಿಕೆ, ವನಜಾಕ್ಷಿ ,ಜಯಮ್ಮ, ತಿಪ್ಪಮ್ಮ, ಗೀತಾ ವೆಂಕಟೇಶರೆಡ್ಡಿ, ಸುಜಾತ, ಮಾಣಿಕ್ಯ ಸತ್ಯನಾರಾಯಣ, ಲಕ್ಷ್ಮೀದೇವಮ್ಮ, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.