ವರದಿ : ರಾಮು ದೊಡ್ಮನೆ ಚಳ್ಳಕೆರೆ

ಚಳ್ಳಕೆರೆ : ಜಿಲ್ಲೆಯಲ್ಲಿ ಅತೀ ದೊಡ್ಡ ತಾಲೂಕು ಕೇಂದ್ರವಾದ ಚಳ್ಳಕೆರೆ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ನಿನ್ನೆ ಮೊನ್ನೆಯದಲ್ಲ ದಿನ ನಿತ್ಯವೂ ವಾಹನ ಸಾವರರು ಅನುಭವಿಸುವಂತ ಸ್ಥೀತಿ‌ ಬಂದೊದಗಿದೆ. ಟ್ರಾಫಿಕ್ ಕಿರಿಕಿರಿಯ ರಕ್ಷಣೆಗೆ ನಿಂತ ಪೊಲೀಸ್ ಇಲಾಖೆ ದಿನ ನಿತ್ಯವೂ ಸಾರ್ವಜನಿಕರಿಗೆ ವಾಹನ ಸವಾರರಿಗೆ ಎಷ್ಟೇ ಬುದ್ದಿವಾದ ಹೇಳಿ ದಂಡದ ಹಾಕಿದರು ಮಾತು ಕೇಳದ ವಾಹನ‌ ಸವಾರರಿಗೆ ವೀಲ್ ಲಾಕ್ ಅಸ್ತ್ರದ ಮೊರೆ ಹೋಗಿದ್ದಾರೆ ಪೊಲೀಸರು. ಹೌದು ನಿಜಕ್ಕೂ ಪೊಲೀಸರ ಕಾರ್ಯಕ್ಕೆ ಹ್ಯಾಂಡ್ಸಪ್ ಹೇಳಲೆಬೇಕು ದಿನನಿತ್ಯ ಗ್ರಾಮೀಣ ಪ್ರದೇಶದಿಂದ‌ ನಗರ ಪ್ರದೇಶಕ್ಕೆ ಬಂದು ಹೋಗುವವರ ಸಂಖ್ಯೆ ಹಾಗೂ ನಗರದಲ್ಲಿ ವಾಸಿಸುವ ಜನಸಂಖ್ಯೆ ಹೊಲಿಸಿಕೊಂಡರೆ ದಿನವೊಂದಕ್ಕೆ ಸಾವಿರಾರು ಜನಸಂಖ್ಯೆ ರಸ್ತೆಮೇಲೆ ಸಂಚರಿಸುತ್ತಾರೆ, ಇನ್ನೂ ಕಳ್ಳತನ, ದರೋಡೆ, ಗಲಾಟೆಗಳು ವಿಐಪಿಗಳು ಬಂದು ಹೋಗುವುದು, ಟ್ರಾಫಿಕ್ ನಿಯಂತ್ರಣ ಈಗೇ ಹತ್ತು ಹಲವು ಕೆಲಸಗಳ ಒತ್ತಡದಲ್ಲಿ ಸರಾಗವಾಗಿ ವಾಹನ ಸಂಚರಿಸಲು ಅನುಕೂಲ ಮಾಡಿ ಕೋಡುತ್ತಿದ್ದಾರೆ.

ಸೂಕ್ತವಾದ ವಾಹನ‌ ನಿಲ್ದಾಣ ಇಲ್ಲ :

ನಗರ ವಿಶಾಲವಾಗಿ ಬೆಳೆದಿದೆ ಹೊರತು ಸೂಕ್ತವಾದ ನಿಗಧಿತ ವಾಹನಗಳ‌ ನಿಲ್ದಾಣ ಮಾಡದೆ ನಗರಸಭೆ ನಿರ್ಲಕ್ಷ್ಯ ವಹಿಸಿದೆ.
ಇನ್ನೂ ರಸ್ತೆಯಲ್ಲಿ ‌ಸುಗಮವಾಗಿ ವಾಹನಗಳು ತಮ್ಮ ಪಥದಲ್ಲಿ ಸಂಚರಿಸಲು ರಸ್ತೆ ನಿಯಮಗಳನ್ನು ಪಾಲಿಸಲು ರಸ್ತೆ ಮಾರ್ಗಗಳು, ಲೈನ್ ಗಳು ಇಲ್ಲದೆ ವಾಹನ ‌ಸವಾರರು ಎಲ್ಲೆಂದರಲ್ಲಿ ನಿಲ್ಲಿಸುವುದು, ಅಜಾಗ್ರತೆಯಿಂದ‌ ಓಡಿಸುವುದು ಹೀಗೇ ನಗರಸಭೆ ಮಾಡುವ ಕೆಲಸಗಳ ನಿರ್ಲಕ್ಷ್ಯ ದಿಂದ ಪೊಲೀಸ್ ರಿಗೆ ಕಿರಿಕಿರಿ ಯಾಗಿದೆ. ಇನ್ನೂ ಎಷ್ಟೇ ಟ್ರಾಫಿಕ್ ಕಿರಿಕಿರಿ ತಪ್ಪಿಸಿದರೆ ಮತ್ತೆ ಅದೇ ರೀತಿಯಲ್ಲಿ ಕೇವಲ ತಾತ್ಕಾಲಿಕ ಪರಿಹಾರ ಸಿಗುತ್ತದೆ ಹೊರತು ಶಾಶ್ವತವಾಗಿ ಪರಿಹಾರ ಇಲ್ಲವಾಗಿದೆ.
ನೆಹರೂ ವೃತ್ತದ ಸುತ್ತಮುತ್ತ ಅಡ್ಡಾದಿಡ್ಡಿ
ವಾಹನ ನಿಲ್ಲಿಸಿದರೆ ಯದ್ವಾತದ್ವಾ ದಂಡ ಕಟ್ಟ
ಬೇಕಾಗುತ್ತದೆ ಎಂದು ಇನ್ಸಪೆಕ್ಟರ್‌ರಾಜ
ಫಕೃದ್ದೀನ್ ದೇಸಾಯಿ ವಾಹನ ಸವಾವವರಿಗೆ
ಎಚ್ಚರಿಕೆ ನೀಡಿದ್ದಾರೆ. ನಗರದ ಮಧ್ಯಭಾಗದಲ್ಲಿ ಹಾದು
ಹೋಗಿರುವ ಎರಡೂ ರಾಷ್ಟ್ರೀಯ ಹೆದ್ದಾರಿ
ನಿತ್ಯ ಅಧಿಕ ಸಂಖ್ಯೆಯ ವಾಹನ ಸಂಚಾರ
ಹಾಗೂ ಜನಸಂದಣಿಯಿಂದ ತುಂಬಿರುತ್ತದೆ.
ವಿಶೇಷವಾಗಿ ಬಳ್ಳಾರಿ, ಪಾವಗಡ ರಸ್ತೆಯಲ್ಲಿ
ಸಂಚಾರ ಮಾಡುವುದೇ ಕಷ್ಟವಾಗಿರುವಾಗ
ನೆಹರೂ ವೃತ್ತದ ಸುತ್ತಲೂ ಎಲ್ಲಂದರಲ್ಲಿ ದ್ವಿಚಕ್ರ
ಹಾಗೂ ಕಾರುಗಳನ್ನು ನಿಲ್ಲಿಸುವದರಿಂದ
ಸಾರ್ವಜನಿಕರು, ವಾಹನ ಸವಾರರು ತೊಂದರೆಗೀಡಾಗಿದ್ದಾರೆ. ಈ ಹಿನ್ನೆಲೆ ಅನೇಕ ಬಾರಿ
ಪೊಲೀಸ್ ಇಲಾಖೆ ಸಮಸ್ಯೆಗಳ ಬಗ್ಗೆ ಪತ್ರಿಕೆ
ಮೂಲಕ ಮಾಹಿತಿ ನೀಡಲಾಗಿತ್ತು. ನಗರದ
ನಾಗರೀಕರು ಹಾಗೂ ವಾಹನ ಸವಾರರು
ಪ್ರತಿನಿತ್ಯ ಎದುರಿಸುತ್ತಿರುವ ತೊಂದರೆಗಳ ಬಗ್ಗೆ
ಮಾಹಿತಿ ಪಡೆದ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್
ಕುಮಾರ್‌ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ
ಕುಮಾರಸ್ವಾಮಿ, ಡಿವೈಎಸ್‌ಪಿ ಟಿ.ಬಿ.ರಾಜಣ್ಣ
ಮಾರ್ಗದರ್ಶನದಲ್ಲಿ ಠಾಣಾ ಇನ್ಸ್‌ಪೆಕ್ಟ‌
ರಾಜ‌ ಫಕೃದ್ದೀನ್‌ ದೇಸಾಯಿ ಹಾಗೂ ಸಿಬ್ಬಂದಿ
ವರ್ಗ ರಸ್ತೆಗೆ
ಅಡ್ಡಲಾಗಿ ನಿಲ್ಲಿಸಿದ ವಾಹನಗಳಿಗೆ
ಲಾಕ್ ಮಾಡಿ ಅಧಿಕ ದಂಡ ವಿಧಿಸುವ
ಕಾರ್ಯವನ್ನು ಕಳೆದ ಎರಡು ದಿನಗಳಿಂದ
ಕೈಗೊಂಡಿದ್ದಾರೆ.

ನಗರದಲ್ಲಿ ಅವೈಜ್ಞಾನಿಕ ಡಿವೈಡರ್ :

ನಗರದಲ್ಲಿ ನೆಹರು ವೃತ್ತದ ಸುತ್ತಲೂ ಐದು ಕಿಲೋ ಮೀಟರ್ ವ್ಯಾಪ್ತಿಯ ನಾಲ್ಕು ರಸ್ತೆಗಳು ಪಾವಗಡ ರಸ್ತೆ, ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ಚಿತ್ರದುರ್ಗ ಮಾರ್ಗದ ರಸ್ತೆ ಇದೆ, ಆದರೆ ಚಿತ್ರದುರ್ಗ ಮಾರ್ಗದ ರಸ್ತೆಯಲ್ಲಿ ನಿರ್ಮಿಸಿದ ಡಿವೈಡರ್ ಅವೈಜ್ಞಾನಿಕವಾಗಿ ಕೂಡಿದೆ ನಿಗಧಿತ ಸೂಕ್ತವಾದ ಸ್ಥಳದಲ್ಲಿ ಡಿವೈಡರ್ ತಿರುವು ನೀಡಬೇಕು ಸೂಚನಾ ಫಲಕಗಳು ಅಳವಡಿಸಬೇಕು ಆದರೆ ರಸ್ತೆ ನಿಯಮಗಳನ್ನು ಮೀರಿ ಎಲ್ಲೆಂದರಲ್ಲಿ ಡಿವೈಡರ್ ತಿರುವು ನೀಡಿದ್ದರಿಂದ ಅಪಘಾತಗಳು ಸಂಭವಿಸಿವೆ, ಇನ್ನೂ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಗೆ ಅತೀ ತುರ್ತು ವಾಹನ ಹೋಗಲು ಅವೈಜ್ಞಾನಿಕ ಡಿವೈಡರ್ ಸುತ್ತಿಕೊಂಡು ಹೋಗಬೇಕು,

ಸರ್ಕಲ್ ಗಳು ನಿರ್ಮಿಸಲು ಅವೈಜ್ಞಾನಿಕ ಡಿವೈಡರ್ ಸೂಕ್ತ :

ನಗರದಲ್ಲಿ ಹಾದು ಹೋಗಿರುವ ನಾಲ್ಕು ರಸ್ತೆ ಮಾರ್ಗಗಳನ್ನೆ ಗುರಿಯಾಗಿಸಿಕೊಂಡ ಸಾರ್ವಜನಿಕರು ತಮ್ಮ ತಮ್ಮ ಮಹಾನೀಯರ ಹಾಗೂ ಅಭಿಮಾನಿಗಳ ವೃತ್ತ ನಿರ್ಮಿಸಲು ತಾ ಮುಂದು ನೀ ಮುಂದು ಎಂಬಂತೆ ನಗರಸಭೆ ಅರ್ಜಿ ನೀಡಿದ್ದಾರೆ, ಇನ್ನೂ ಚಿತ್ರದುರ್ಗ ಮಾರ್ಗದ ರಸ್ತೆಯಲ್ಲಿ ಅವೈಜ್ಞಾನಿಕ ಡಿವೈಡರ್ ತಿರುವು ಇದ್ದ ಕಡೆಗಳಲ್ಲಿ ವೃತ್ತ‌ ನಿರ್ಮಿಸಲು ಸಾರ್ವಜನಿಕರು ಮುಂದಾಗಿದ್ದಾರೆ ಸರಕಾರದ ನಿಯಮಗಳನ್ನು ಪಾಲಿಸದ ನಗರಸಭೆ ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವಂತಾಗಿದೆ.. ಹೇಳಿಕೆ : ಪೋಲಿಸ್ ರೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ, ರಸ್ತೆ ನಿಯಮಗಳನ್ನು ಪಾಲಿಸಿದರೆ ಪೊಲೀಸ್ ರಿಗೆ ಕೆಲಸ ಇಲ್ಲದಂತಾಗುತ್ತಾದೆ ಇನ್ನೂ ನಗರಸಭೆ ಇಲಾಖೆಯ ಅಧಿಕಾರಿಗಳು ರಸ್ತೆ ಮಾರ್ಗ ಸೂಚಿ ಫಲಕಗಳನ್ನು , ನಿಗಧಿತ ನಿಲ್ದಾಣ, ರಸ್ತೆಗಳ ಪಥಗಳ‌ ಲೈನ್, ಈಗೇ
ಸಿಸಿ ಕ್ಯಾಮರಾಗಳನ್ನು, ಹಾಕಿಸಬೇಕು ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು….
---ಸೂರನಹಳ್ಳಿ‌ ಜಗದೀಶ್,
ಡಿಸಿಸಿ ಬ್ಯಾಂಕ್ ನಿರ್ದೇಶಕರು , ಮೇಘನಾ ಜ್ಯೂಯಲರ್ಸ್ ಚಳ್ಳಕೆರೆ.
ಹೇಳಿಕೆ : ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು‌ ನಿಲ್ಲಿಸದೆ ನಿಗಧಿ ಸ್ಥಳದಲ್ಲಿ ನಿಲ್ಲಿಸಲು ನಗರಸಭೆಯಿಂದ ಜಾಗ‌ನಿಗಧಿ‌ ಮಾಡಬೇಕು, ರಸ್ತೆ ನಿಯಮಗಳನ್ನು ಪಾಲಿಸುವಂತೆ ‌ಪಥಗಳ ಮಾರ್ಗ ಹಾಕಬೇಕು, ನಿಷೇಧಿತ ವಲಯ ಎಂದು ನಾಮಫಲಕ ಹಾಕಬೇಕು ಸುಖ‌ಸುಮ್ಮನೆ ವಾಹನ ಸವಾರರಿಗೆ ಧಂಡ ಹಾಕುವುದರಲ್ಲಿ ಅರ್ಥ ಇರುವುದಿಲ್ಲ, ಮೂಲಭೂತ ಸೌಕರ್ಯಗಳನ್ನು‌ ನೀಡಿ‌ ನಿಯಮಗಳನ್ನು ಪಾಲಿಸುವಂತೆ ಮಾಡಬೇಕು …..
---ನೇತಾಜಿ ಪ್ರಸನ್ನ ಕುಮಾರ್
ಸರಕಾರದ ನಾಮನಿರ್ದೇಶನ ಸದಸ್ಯರು ನಗರಸಭೆ ಚಳ್ಳಕೆರೆ
ಹೇಳಿಕೆ : ಪೊಲೀಸ್ ಇಲಾಖೆಯಿಂದ ನಮಗೆ ವಾಹನಗಳ ನಿಗಧಿತ ಸ್ಥಳ ಹಾಗೂ ಅಪಘಾತ ವಲಯ, ಡಿವೈಡರ್ ತಿರುವು, ನಿಷೇಧಿಸಲಾದ ಸ್ಥಳ, ರಸ್ತೆ ಮಾರ್ಗ ಗಳ ಲೈನ್ ಈಗೇ ನಿಗಧಿತ ಸ್ಥಳಗಳ ಪಟ್ಟಿ ನೀಡಿದರೆ ನಗರಸಭೆ ವತಿಯಿಂದ ಅನುದಾನ ಹೊದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುತ್ತದೆ…. ಹೇಳಿಕೆ : ನಗರಸಭೆಯಲ್ಲಿ ರಸ್ತೆ ಅಗಲೀಕರಣ ಈಗಾಗಲೇ ಕೆಲವರು ನ್ಯಾಯಾಲಯದಲ್ಲಿ ದಾವೆವುಡಿದ್ದರಿಂದ ಪ್ರಕರಣ ಇತ್ಯರ್ಥ ಹಾಗುವರೆಗೂ ರಸ್ತೆ ಹಾಗೂ ಕೆಲವು ಸ್ಥಳಗಳಿಗೆ ನಿರ್ಧಾರ ತೆಗೆದುಕೊಳ್ಳಲು ಹಾಗುವುದಿಲ್ಲ ಅದನ್ನು ಒರತಿಪಡಿಸಿ ಉಳಿದ ಸ್ಥಳಗಳಲ್ಲಿ ನಿಷೇಧಿತ, ಹಾಗು ವಾಹನಗಳು ನಿಲುಗಡೆ ಸ್ಥಳ ನಾಮ ಫಲಕಗಳನ್ನು ಹಾಕಲು, ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ತಹಶೀಲ್ದಾರ್,ಪೌರಾಯುಕ್ತರು, ಹಾಗು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮವಹಿಸಲಾಗುವುದು….
---ಬಿಟಿ.ರಾಜಣ್ಣ, ಪೊಲೀಸ್ ಉಪಾಧಿಕ್ಷಕರು ಚಳ್ಳಕೆರೆ

About The Author

Namma Challakere Local News

You missed

error: Content is protected !!