ಸಾಮಾಜಿಕ ನಾಟಕಗಳಲ್ಲಿ ಬರುವ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಲ್ಲೂರಹಳ್ಳಿ ಲೇಖಕ.ಟಿ. ಶ್ರೀಧರ್. (ಎಂಎಸ್ಸಿ)

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಪೌರಾಣಿಕ ಜಾನಪದ ಕಲೆಗಳು ನಶಿಸಿಹೋಗುತ್ತವೆ ಅವುಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮಲ್ಲೂರಹಳ್ಳಿ ಲೇಖಕ ಟಿ. ಶ್ರೀಧರ್( ಎಂಎಸ್ಸಿ) ಹೇಳಿದ್ದಾರೆ.

ಅವರು ಬುಧವಾರ ರಾತ್ರಿ ಹೋಬಳಿಯ ಮಲ್ಲೂರಹಳ್ಳಿ ಗ್ರಾಮದಲ್ಲಿ ಕಾರ್ತಿಕ ಮಾಸದ ಶ್ರೀ ಕೊಲ್ಲಾಪುರದಮ್ಮ ದೇವಿ ಜಾತ್ರೋತ್ಸವದ ಪ್ರಯುಕ್ತ ಗ್ರಾಮದ ಯುವಕರು ಪ್ರದರ್ಶನ ಗೊಳ್ಳುತ್ತಿರುವ ಸಾಮಾಜಿಕ ನಾಟಕದಲ್ಲಿ ತಮ್ಮ ಎರಡನೇ ಕಲಾಕುಸುಮ “ಮುತ್ತು ಕೊಟ್ಟು ಮರೆಯಾದ ಚೆಲುವೆ ಅರ್ಥಾತ್ ಮೆಚ್ಚಿಕೊಂಡ ಪ್ರೀತಿ ಮುಚ್ಚಿ ಹೋಯಿತು” ಎಂಬ ಸಾಮಾಜಿಕ ನಾಟಕದ ಪುಸ್ತಕ ಬಿಡುಗಡೆಯನ್ನು ಮಾಡಿ ಮಾತನಾಡಿದರು ಸಮಾಜದಲ್ಲಿರುವ ಹಲವಾರು ಅಂಕುಡೊಂಕುಗಳನ್ನು ತಿಳಿಸಿಕೊಡುವ ಸಾಮಾಜಿಕ ನಾಟಕಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಸಾಮಾಜಿಕ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಗ್ರಾಮೀಣ ಪ್ರದೇಶದ ರಂಗಭೂಮಿ ಕಲಾವಿದರನ್ನು ಪೋಷಿಸಿ ಗೌರವಿಸಿ ಆರ್ಥಿಕವಾಗಿ ನೆರವು ನೀಡಿ ಬೆಳೆಸಬೇಕಾಗಿದೆ ಎಂದರು

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ. ಮಂಜುನಾಥ್, ಉಪ್ಪಾರಹಟ್ಟಿ ವಕೀಲ ಬಿ ಬೋಸಯ್ಯ, ತುರುವನೂರು ಗ್ರಾ.ಪಂ ಉಪಧ್ಯಾಕ್ಷ ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿವೈ ತಿಪ್ಪೇಶ್, ಗೊಂಚಿಕಾರ್ ಮೋಹನ್ ರೆಡ್ಡಿ, ಪರ್ವತಯ್ಯ, ಜಯ್ಯಣ್ಣ, ರಾಜಣ್ಣ, ಗುರು ಚಿನ್ನಯ್ಯ, ರಾಮಚಂದ್ರ, ಕೆಂಪ, ಶರತ್, ಎಂ.ಓ.ಮಂಜುನಾಥ, ಚನ್ನಕೇಶವ, ಕೇಶವ ಸೇರಿದಂತೆ ಸಮಸ್ತ ಮಲ್ಲೂರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಕ್ಷಕರಾದ ವಿಜಯ್ ಕುಮಾರ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.

ನಾಟಕದಲ್ಲಿ ರಾಜು ಮತ್ತು ರವಿ ಖಳನಾಯಕರಾಗಿ, ಮಲ್ಲಿ ಮತ್ತು ಪಾಪಯ್ಯ ಕಥಾನಾಯಕರಾಗಿ, ತಿಪ್ಪೇಶ್ ಮತ್ತಿ ಪೈಲ್ವಾನ್ ತಿಪ್ಪು ಹೀರೋಗಳಾಗಿ, ಸಂತೋಷ್, ಲೋಕೇಶ್ ಮತ್ತು ಬಂಗಾರಿ ಹಾಸ್ಯ ಪಾತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿದರು.

ಸ್ಪಂದನ ಮೆಲೋಡಿಯಸ್ ನ ಡಿ.ರಾಜು ಮತ್ತು ಸಂಗಡಿಗರಿಂದ ಸಂಗೀತ ತಬಲ, ಹಾರ್ಮೋನಿಯಂ, ಕ್ಯಾಷಿಯೋ, ಹಿನ್ನೆಲೆ ನಡೆಸಿಕೊಟ್ಟರು.

About The Author

Namma Challakere Local News
error: Content is protected !!