ವಿದ್ಯಾರ್ಥಿಗಳಿಂದ ಗಮನ ಸೆಳೆದ ಮಕ್ಕಳ ಸಂತೆ
ಚಳ್ಳಕೆರೆ :
ಬನ್ನಿ ಬನ್ನಿ ತಾಜಾ ತಾಜಾ ತರಕಾರಿಗಳನ್ನು ಕೊಂಡುಕೊಂಡು ತಿನ್ನಿ, ಉತ್ತಮ ಆರೋಗ್ಯವನ್ನು ಪಡೆಯಿರಿ ಇದು ನಗರದ ಸರಕಾರಿ ಉರ್ದು ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ. ಕೂಗಿ ಗ್ರಾಹಕರನ್ನು ತಮ್ಮ ಕಡೆ ಸೆಳೆದು ವ್ಯಾಪಾರ ಮಾಡುತ್ತಿದ್ದ ಪರಿ.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಆವರಣದಲ್ಲಿ ಸರಕಾರಿ ಉರ್ದು ಶಾಲೆಯ ಮಕ್ಕಳು ಲವಲವಿಕೆಯಿಂದ ಹಣ್ಣುಗಳು ಹಾಗೂ ವಿವಿಧ ಬಗೆಯ ತರಕಾರಿಗಳನ್ನು ಇಟ್ಟು ವ್ಯಾಪಾರ ಮಾಡುವ ಮೂಲಕ ಹಣ ಪಡೆದು ಚಿಲ್ಲರೆ ವಾಪಸ್ ಕೊಟ್ಟು ವ್ಯವಹಾರಿಕ ಜ್ಞಾನದ ಪ್ರಾತ್ಯಕ್ಷಿತೆಯನ್ನು. ಪಡೆದುಕೊಂಡರು.
ಇನ್ನೂ ಶಾಲೆಯ ಮುಖ್ಯ ಶಿಕ್ಷಕರಾದ ನಸೀಂ ಉನ್ನಿಸ್,
ಸಹ ಶಿಕ್ಷಕರು, ಮಕ್ಕಳ ಸಂತೆಗೆ ಸಾಥ್ ನೀಡಿದರು,
ಸ್ಥಳದಲ್ಲಿ ಅಡುಗೆ ಸಹಾಯಕರು, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಸಾರ್ವಜನಿಕರು ಇತರರು ಹಾಜರಿದ್ದರು.