ಸಂಭ್ರಮಕ್ಕೆ ಸಾಕ್ಷಿಯಾದ ಎನ್ ಗೌರಿಪುರ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ.
ನಾಯಕನಹಟ್ಟಿ:: ಸಮೀಪದ ಎನ್ ಗೌರಿಪುರದಲ್ಲಿ ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಗ್ರಾಮದ ಆರಾಧ್ಯ ದೈವ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ವೇಳೆ ವೀರಗಾಸೆ ನಂದಿಕೋಲು ತಮಟೆ ವಾದ್ಯಗಳೊಂದಿಗೆ ಎನ್ ಗೌರಿಪುರ ಗ್ರಾಮದ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಇನ್ನೂ ರಥೋತ್ಸವಕ್ಕೆ ಶ್ರೀ ಉಮಾಪತಿ ಮತ್ತು ಸಹೋದರರು ಜಯಲಕ್ಷ್ಮಿ ಬೋರ್ವೆಲ್ಸ್ ನಾಯಕನಹಟ್ಟಿ ರವರ ಮನೆಯಿಂದ ರಥಕ್ಕೆ ಬಲಿಯನ್ನ ತರಲಾಯಿತು. ಕಾಸು ಮೀಸಲು ಮೊಸರು ಕುಂಭ ಜಿನಿಗೆ ಹಾಲು ತಂದು ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವಕ್ಕೆ ಎಡೆ ಹಾಕಲಾಯಿತು.
ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಪಾದಗಟ್ಟೆ ವರೆಗೆ ಮೆರವಣಿಗೆ ನಡೆಯಿತು ರಥೋತ್ಸವಕ್ಕೂ ಮೊದಲು ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು ಮುಕ್ತಿ ಬಾವುಟವನ್ನು ಶ್ರೀ ವಿಜಯಲಕ್ಷ್ಮಿ ಬೋರ್ವಲ್ಸ್ ನ ಶ್ರೀ ಉಮಾಪತಿ ಮತ್ತು ಸಹೋದರರು ಪಡೆದುಕೊಂಡರು ನಂತರ ಮಹಾಮಂಗಳಾರತಿಯೊಂದಿಗೆ ಶ್ರೀ ಉಮಾಮಹೇಶ್ವರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು
ಇದೇ ವೇಳೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಬಿ ಎಂ ತಿಪ್ಪೇಸ್ವಾಮಿ ಮಾತನಾಡಿದರು ಗೌರಿಪುರ ಗ್ರಾಮದಲ್ಲಿ ಪ್ರತಿವರ್ಷದಂತೆ ವಿಜೃಂಭಣೆಯಿಂದ ಶ್ರೀ ಉಮಾಮಹೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿದೆ ಈ ಒಂದು ರಥೋತ್ಸವಕ್ಕೆ ಸುತ್ತ ಮುತ್ತಲಿನ ಗ್ರಾಮಸ್ಥರು ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಟಿ ಸಿದ್ದಪ್ಪ, ಆಡಳಿತ ಅಧಿಕಾರಿ ಎಂ.ಪಿ. ಭೋಗೇಶ್, ಎನ್ ಮಹದೇವಪುರ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ತಿಪ್ಪಮ್ಮ ತಿಪ್ಪೇಸ್ವಾಮಿ ಗೌರಿಪುರ, ಮಂಜು. ಸೇರಿದಂತೆ ಸಮಸ್ತ ಗೌರಿಪುರ ಗ್ರಾಮಸ್ಥರು ಉಪಸ್ಥಿತರಿದ್ದರು