ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ರಸ್ತೆ ದುರಸ್ತಿಪಡಿಸುವಂತೆ ಆಗ್ರಹ: ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ.
ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ಕಿತ್ತು ಹೋಗಿದ್ದು, ದುರಸ್ತಿ ಮಾಡಿಸುವಂತೆ ತಿಮ್ಮಪ್ಪನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಎಸ್ ಮಂಜಣ್ಣ ಆಗ್ರಹಿಸಿದರು.
ನಂತರ ಮಾತನಾಡಿದ ಅವರು ರಾಮಸಾಗರ ದಿಂದ ಗಜ್ಜುಗಾನಹಳ್ಳಿ ಮೂಲಕ ಹಾದು ಎನ್ ದೇವನಹಳ್ಳಿಗೆ ಸಂಪರ್ಕ ಕಲಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಕೆಲ ತಿಂಗಳ ಹಿಂದೆ ಸುರಿದ ಮಳೆಯಿಂದ ಸುತ್ತಮುತ್ತಲ ಕೆರೆಗಳು ತುಂಬಿ ಕೋಡಿ ಬಿದ್ದಿದ್ದವು. ಕೊಡಿ ನೀರು ರಸ್ತೆಯಲ್ಲಿ ಎಲ್ಲಾ ಹರಿದು ರಾಮಸಾಗರದಿಂದ ಗಜ್ಜಗಾನಹಳ್ಳಿಯ ಮಧ್ಯೆ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಈ ರಸ್ತೆಯ ಮೂಲಕ ಶಾಲಾ ವಾಹನಗಳು, ಆಟೋ, ಬೈಕ್ ಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ತಮ್ಮ ಜೀವವನ್ನು ಬಿಗಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು,ಸರ್ಕಾರದ ಯಾವುದೇ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸಿದರು ನೋಡಿ ನೋಡದಂತೆ ಹೋಗುತ್ತಿರುವುದು ಸೂಚನೆಯ ಸಂಗತಿ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ರೈತ ಎನ್ ಓಬಣ್ಣ ತಿಪ್ಪೇಸ್ವಾಮಿ ಸೋಮಶೇಖರ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.