ಸೋಲು ಗೆಲುವು ಸಮಾನ ರೀತಿಯಲ್ಲಿ ಸ್ವೀಕರಿಸಬೇಕು : ಕರವೇ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ನಾಯ್ಕ್

ನಾಯಕನಹಟ್ಟಿ :
ನಾಯಕನಹಟ್ಟಿ ಸಮೀಪ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಮಾರಮ್ಮ ದೇವಿ ಹಬ್ಬದ ಪ್ರಯುಕ್ತ ಜೆ.ಟಿ ಕ್ರಿಕೆಟರ್ಸ್ ವತಿಯಿಂದ ಪ್ರಪ್ರಥಮ ಬಾರಿಗೆ ಅಂಡರ್ ೧೯ ಕ್ರಿಕೆಟ್ ಟೂರ್ನಮೆಂಟನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ರವಿಕುಮಾರ್ ನಾಯ್ಕ್ ಜಿಲ್ಲಾಧ್ಯಕ್ಷರು ಕರವೇ ಕನ್ನಡಸೇನೆ ಚಿತ್ರದುರ್ಗ ಹಾಗೂ ಮಧ್ಯ ಕರ್ನಾಟಕ ಉಸ್ತುವಾರಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದಂತ ಸತೀಶ್ ಕುಮಾರ್ ನಾಯಕನಹಟ್ಟಿ ಹೋಬಳಿಯ ಅಧ್ಯಕ್ಷರಾದಂತಹ ಮುತ್ತಯ್ಯ ಅಣ್ಣನವರು ಹಾಗೂ ನಾಯಕನಹಟ್ಟಿ ಹೋಬಳಿಯ ಎಲ್ಲಾ ಕರವೇ ಕನ್ನಡಸೇನೆ ಪದಾಧಿಕಾರಿಗಳು ಟೂರ್ನಮೆಂಟ್ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉದ್ಘಾಟನೆಯನ್ನು ಕುರಿತು ಮಾತನಾಡಿದರು ಪ್ರತಿಯೊಂದು ಹಳ್ಳಿಯ ಯುವಕರು ಹಾಗೂ ಪ್ರತಿಭೆಗಳು ನೂತನವಾಗಿ ಬೆಳೆಬೇಕು ಪ್ರತಿಭೆ ಅನ್ನೋದು ಕೇವಲ ಹಳ್ಳಿಗೆ ಸೀಮಿತವಾಗಿಲ್ಲದೆ ರಾಜ್ಯ ದೇಶಗಳಲ್ಲೂ ಗುರುತಿಸಿಕೊಳ್ಳಲಿ ಯಾವುದೇ ಸಹಕಾರ ಇದ್ರೂ ನಮ್ಮ ಸಂಘಟನೆಯಿAದ ಮಾಡುತ್ತೇವೆ ರಾಜ್ಯಕ್ಕೆ ಹಾಗೂ ನಮ್ಮ ದೇಶಕ್ಕೆ ಕ್ರಿಕೆಟ್ ಆಟಗಾರರು ಇನ್ನು ಹೆಚ್ಚಿನ ಪ್ರತಿಭೆಗಳು ಈ ದೇಶದಲ್ಲಿ ಹುಟ್ಟಿಕೊಳ್ಳಲಿ ಎಂದು ಯುವಕರಿಗೆ ತಿಳಿಸಿದರು, ಸೋಲು ಗೆಲುವು ಎಂಬುದು ಸಮಾನ ರೀತಿಯಲ್ಲಿ ಸ್ವೀಕರಿಸಬೇಕು ಮುಂದಿನ ದಿನಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ನಮ್ಮ ಸಹಕಾರ ನಿಮ್ಮೂಂದಿಗೆ ಸದಾ ಇರುತ್ತೆ ಎಂದು ಕರವೇ ಕನ್ನಡಸೇನೆ ಜಿಲ್ಲಾಧ್ಯಕ್ಷರು ರವಿಕುಮಾರ್ ನಾಯ್ಕ್ ಹೇಳಿದರು.

ಕ್ರೀಡೆಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ನೀವು ಕ್ರೀಡೆಗಳನ್ನು ಪ್ರೀತಿಸಬೇಕು. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಹೊರತಾಗಿ ಬೌದ್ಧಿಕ ಬೆಳವಣಿಗೆಯಲ್ಲಿ ಆಟವು ವಿಶೇಷ ಕೊಡುಗೆಯನ್ನು ಹೊಂದಿದೆ, ನಾವು ವಿವಿಧ ರೀತಿಯ ಆಟಗಳನ್ನು ಆಡುತ್ತೇವೆ ಅದು ನಮಗೆ ಮನರಂಜನೆ ನೀಡುತ್ತದೆ ಮತ್ತು ಅದೇ ಸಮಯದಲ್ಲಿ ನಮ್ಮ ದೇಹದ ಪ್ರತಿಯೊಂದು ಭಾಗ, ಸ್ನಾಯುಗಳು ಇತ್ಯಾದಿಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನಮ್ಮ ದೇಹದಲ್ಲಿ ನಾವು ಶಕ್ತಿಯನ್ನು ಅನುಭವಿಸುತ್ತೇವೆ ಹಾಗೇ ಆಟದಲ್ಲಿ ಮುಂದೆ ಸಾಗುಬೇಕು ಹಿಂದೆಕ್ಕೆ ಯಾವುದೇ ಕಾರಣಕ್ಕೂ ಬರಬಾರದು ನಮ್ಮ ಪ್ರದೇಶ ಯುವಕರು ಉತ್ತಮ ಮಟ್ಟದಲ್ಲಿ ಬೆಳೆಯಬೇಕು ಎಂದು ಕರವೇ ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಸತೀಶ ಹೇಳೀದರು.

ಆಟವಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇರುತ್ತದೆ. ಆದ್ದರಿಂದಲೇ ಮನುಷ್ಯನಿಗೆ ತಿನ್ನುವುದು, ಕುಡಿಯುವುದು, ಮಲಗುವುದು, ಗಾಳಿ ಇತ್ಯಾದಿಗಳು ಎಷ್ಟು ಅವಶ್ಯವೋ, ಆಟವೂ ಅಷ್ಟೇ ಅಗತ್ಯ. ವಾಸ್ತವವಾಗಿ, ಕ್ರೀಡೆಯು ಒಂದು ರೀತಿಯ ವ್ಯಾಯಾಮವಾಗಿದೆ. ಕ್ರೀಡೆ ಮಾನವರಿಗೆ ಸಂಪೂರ್ಣವಾಗಿ ಅವಶ್ಯಕವಾಗಿದೆ. ಪ್ರತಿಯೊಂದು ಆಟದಲ್ಲಿ ನಿಗದಿತ ನಿಯಮಗಳನ್ನು ಅನುಸರಿಸಬೇಕು. ಕಂಡಕ್ಟರ್‌ಗಳು, ಗೈಡ್‌ಗಳು ಮತ್ತು ಶಿಕ್ಷಕರ ಆದೇಶಗಳನ್ನು ಪಾಲಿಸಬೇಕು. ಆದ್ದರಿಂದ ಆಟಗಾರನ ಜೀವನ ಮಟ್ಟವು ಸ್ವಯಂಚಾಲಿತವಾಗಿ ಶಿಸ್ತುಬದ್ಧವಾಗಿರುಬೇಕು ಎಂದು ಕರವೇ ಹೋಬಳಿ ಅಧ್ಯಕ್ಷ ಮುತ್ತಯ್ಯ ಹೇಳಿದರು.

ಈ ಸಂಧರ್ಭದಲ್ಲಿ ಕರವೇ ಉಪಾಧ್ಯಕ್ಷ ರಾಘವೇಂದ್ರ, ನಗರ ಘಟಕದ ಅಧ್ಯಕ್ಷ ಓ.ತಿಪ್ಪೇಸ್ವಾಮಿ, ಕರವೇ ಪ್ರಧಾನ ಕಾರ್ಯದರ್ಶಿ ಜೋಗಿಹಟ್ಟಿ ಮಂಜು, ನಗರ ಘಟಕ ಉಪಾಧ್ಯಕ್ಷ ಬಿಳೆಕಲ್ ಮಂಜು, ಯುವ ಘಟಕ ಅಧ್ಯಕ್ಷ ನವೀನ್ ಮದಕರಿ, ವಿಧ್ಯಾರ್ಥಿ ಘಟಕ ಅಧ್ಯಕ್ಷ ಪ್ರಸನ್ನ, ಆಟಗಾರರರು ಹಾಗೂ ಗ್ರಾಮದ ಉಪಸ್ಥಿತಿತರು ಇದ್ದರು.

Namma Challakere Local News
error: Content is protected !!