ಚಳ್ಳಕೆರೆ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕಲೆಯಲ್ಲಿ ಅಂತ್ಯ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ
ಘಟನೆ ನಡೆದಿದೆ.
ತನ್ನ ಹೆಂಡತಿ ಕೈಯಲ್ಲಿ ಕೊಲೆಯಾದ ವ್ಯಕ್ತಿಯನ್ನು
ರಾಘವೇಂದ್ರ (35) ಎಂದು ತಿಳಿದು ಬಂದಿದೆ
ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ ಹಾಗೂ ಪ್ರಿಯಕರ ರಾಜಣ್ಣ
ಜತೆ ಸೇರಿ ಪತಿ ರಾಘವೇಂದ್ರನನ್ನು ಮುಗಿಸಿದ್ದಾರೆ.
ರಾಘವೇಂದ್ರನಿಗೆ
ಮೊದಲಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿದ್ದಾರೆ. ಬಳಿಕ ನಿದ್ರೆಗೆ
ಜಾರುತ್ತಿದ್ದಂತೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಪತಿಯನ್ನು ಕೊಂದು ಹೊಟ್ಟೆ ಉರಿಯಿಂದ ಸತ್ತಿದ್ದಾನೆ ಎಂದು ದಿವ್ಯ
ನಾಟಕವಾಡಿದ್ದಳು.ಮೊದಲು ಯುಡಿಆರ್ ದಾಖಲಿಸಿಕೊಂಡಿದ್ದ
ಪೊಲೀಸರಿಗೆ ತನಿಖೆಯಲ್ಲಿ ಕೊಲೆ ಸತ್ಯ ಬಯಲಾಗಿದೆ.
ಮರಣೋತ್ತರ
ಪರೀಕ್ಷೆ ವೇಳೆ ಇದು ಕೊಲೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರನ್ನು
ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಕೂಡಲೇ ದಿವ್ಯ, ಮಾರಣ್ಣ, ರಾಜಣ್ಣನನ್ನು ಪೊಲೀಸರು ವಶಕ್ಕೆ
ಪಡೆದಿದ್ದಾರೆ. ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಸಿಪಿಐ ಹನುಮಂತಪ್ಪ
ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತಳಕು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.