ಚಳ್ಳಕೆರೆ :
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮಿತಿ
ರಚನೆಯಾಗಿದೆ
ಅನ್ಯಾಯ, ಭ್ರಷ್ಟಾಚಾರ, ಲಂಚದ ಹಾವಳಿ ವಿರುದ್ಧ ಹೋರಾಡಲು
ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ರಚಿಸಲಾಗಿದೆ
ಎಂದು ಸಮಿತಿ ಅಧ್ಯಕ್ಷ ಪಿ. ಈ ವೆಂಕಟಸ್ವಾಮಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗದಲ್ಲಿ
ಕಲುಷಿತ ವಾತಾವರಣ ನಿರ್ಮಾಣವಾಗಿದೆ.
ಅನೇಕ ರೋಗಿಗಳು
ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ನಗರದಲ್ಲಿ ಮೂಲಭೂತ
ಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ
ಮರೀಚಿಕೆಯಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ
ಕೆಲಸಗಳಾಗುವುದಿಲ್ಲ ಎಂದರು.