ಚಳ್ಳಕೆರೆ :
ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಿದ ಗ್ರಾಪಂ
ಸಿಬ್ಬಂದಿ
ಮೊಳಕಾಲ್ಕೂರು ಕ್ಷೇತ್ರದ ಓಬಳಾಪುರ ಗ್ರಾಪಂ ಕೇಂದ್ರದಲ್ಲಿರುವ
ಓವರ್ ಹೆಡ್ ಟ್ಯಾಂಕ್, ಸ್ವಚ್ಚತೆ ಮಾಡದಿರುವುದರಿಂದ ಕುಡಿಯುವ
ನೀರಿನ ಜೊತೆಗೆ ಕ್ರಿಮಿಕೀಟಗುಳಿಂದ ಕೂಡಿದ ಕಲುಷಿತ ನೀರು
ಸೇವಿಸಿ ಸಾಂಕ್ರಮಿಕ ರೋಗ ಭೀತಿ ಎದುರಾಗಿದ್ದು, ಕೂಡಲೇ
ಸಂಬಂದಪಟ್ಟ ಅಧಿಕಾರಿಗಳು ಇಂದು ಓವರ್ ಹೆಡ್ ಟ್ಯಾಂಕಿಗೆ ಏಣಿ
ಅಳವಡಿಸಿ ಸ್ವಚ್ಚತೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.
ಇದರ ಬೆನ್ನಲ್ಲೆ ಏಣಿ ಕಟ್ಟಿಕೊಂಡು ಗ್ರಾಪಂ ಸಿಬ್ಬಂದಿ ಟ್ಯಾಂಕ್
ಸ್ವಚ್ಚಗೊಳಿಸಿದ್ದಾರೆ.