ಚಳ್ಳಕೆರೆ :
ಕಂಟೈನರ್ ಲಾರಿ ಪಲ್ಟಿ ಚಾಲಕ ಪ್ರಾಣಾಪಾಯದಿಂದ
ಪಾರು
ಹೊಳಲ್ಕೆರೆ ಕ್ಷೇತ್ರದ ಭರಮಸಾಗರ ಹೊರವಲಯದ ಎನ್ ಹೆಚ್ 4
ರ ಬಳಿ ಇಂದು ಬೆಳಗ್ಗೆ ಕಂಟೈನರ್ ಲಾರಿಯೊಂದು ಪಲ್ಟಿಯೊಡೆದು
ಮುಂಬೈ ಮೂಲದ ಚಾಲಕನಿಗೆ ಸಣ್ಣಪುಟ್ಟ ಪೆಟ್ಟು ಬಿದ್ದು
ಗಾಯಗೊಂಡಿದ್ದಾನೆ.
ಲಾರಿ ಮುಂಬೈ ನಿಂದ ತಮಿಳುನಾಡಿನ ಕೊಯಮತ್ತೂರಿಗೆ
ಹೋಗುತ್ತಿರುವಾಗ, ಅಡ್ಡ ಬಂದ ಹಸು ತಪ್ಪಿಸಲು ಹೋಗಿ
ಕಂಟೇನರ್ ಲಾರಿ ಪಲ್ಟಿ ಹೊಡೆದು ಲಾರಿ ಮುಂಭಾಗ ಜಖಂ
ಗೊಂಡಿದೆ.
ಚಾಲಕನಿಗೆ ಸಣ್ಣಪುಟ್ಟ ಪೆಟ್ಟಾಗಿ ಪ್ರಾಣಾಪಾಯದಿಂದ
ಪಾರಾಗಿದ್ದಾನೆ.
ಭರಮಸಾಗರ ಪೊಲೀಸರು ಸ್ಥಳಕ್ಕೆ ಬಂದು
ಪರಿಶೀಲನೆ ನಡೆಸಿದ್ದಾರೆ.