ಚಳ್ಳಕೆರೆ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಳ್ಳಕೆರೆ ತಾಲೂಕು ಘಟಕದಿಂದ ಇಂದು ಅನಿರ್ದಿಷ್ಟ ಅವಧಿಗೆ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಚಳ್ಳಕೆರೆ ತಾಲೂಕು ಕಛೇರಿ ಮುಂದೆ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಧರಣಿ ನಿರತರಾಗಿದ್ದರು.
ತಾಲ್ಲೂಕು ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ
ಗ್ರಾಮ ಲೆಕ್ಕಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಕೇಂದ್ರ
ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ತಾಲೂಕಿನ
ಗ್ರಾಮಾಡಳಿತ ಅಧಿಕಾರಿಗಳ ಮೂಲಕ
ಮೊಬೈಲ್ ತಂತ್ರಾಂಶ ಗಳ ಒತ್ತಡ ಹೇರುತ್ತಿದ್ದು ಅದಕ್ಕೆ ಮೂಲಭೂತ
ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ
ವಿವಿಧ ಸೇವಾ ಸೌಲಭ್ಯಗಳನ್ನು ಒದಗಿಸಬೇಕು, ನಮ್ಮ
ಬೇಡಿಕೆಗಳು ಈಡೇರುವವರೆಗೂ
ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಲು ನಿರ್ಧರಿಸಲಾಗಿರುತ್ತದೆ ಎಂದು ತಾಲೂಕು ಘಟಕದ ಅಧ್ಯಕ್ಷ ಎಂ.ಪ್ರಕಾಶ್ ಹೇಳಿದರು.
ಇನ್ನೂ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸಾಥ್ ನೀಡಿದ್ದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ
ಬೇಡಿಕೆಗಳು
ಹಾಗೂ ಸಮಸ್ಯೆಗಳು ಈಡೇರುವವರೆಗೆ ಮುಷ್ಕರವನ್ನು ಹಿಂಪಡೆಯುವುದಿಲ್ಲ, ಎಂದು ನೌಕರರ ಸಂಘದ ಅಧ್ಯಕ್ಷ ಪಿ.ಲಿಂಗೇಗೌಡ ಹೇಳಿದರು.
ಇನ್ನೂ ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ದಿನದ ಇಪ್ಪತ್ತು ನಾಲ್ಕು ತಾಸು ಸಾರ್ವಜನಿಕರ ಸೇವೆಗೆ ಮುಡಿಪಾಗಿಟ್ಟ ಇವರ ಸೇವೆಗೆ ಸರಕಾರ ಅಗತ್ಯವಾದ ಸೌಕರ್ಯಗಳನ್ನು ನೀಡಬೇಕು, ಇವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀಕಂಠ ಮೂರ್ತಿ, ಜಯಣ್ಣ, ಚಂದ್ರಣ್ಣ, ಚೆನ್ನಕೇಶವ, ಹನುಮಂತಪ್ಪ, ಹಾಗೂ
ಶಿರಸ್ತೆದಾರ್ ಸದಾಶಿವಪ್ಪ, ತಳಕು ಆರ್ ಐ ಲಿಂಗೇಗೌಡ, ಕಸಬಾ ಕಂದಾಯ ಅಧಿಕಾರಿ ತಿಪ್ಪೇಸ್ವಾಮಿ, ನಾಯಕನಹಟ್ಟಿ ಆರ್ ಐ ಚೇತನ್,
ತಾಲೂಕು ಘಟಕದ ಅಧ್ಯಕ್ಷರಾದ ಎಂ ಪ್ರಕಾಶ್ , ಗೌರವಾಧ್ಯಕ್ಷ ಆರ್ ರಂಗನಾಥ್ , ಉಪಾಧ್ಯಕ್ಷ ಜಿಎನ್ ಕರಿಬಸಜ್ಜಯ್ಯ, ಪ್ರಧಾನ ಕಾರ್ಯದರ್ಶಿ ಹರೀಶ್ ವೈ , ರಾಜು ನಾಯಕ, ರವಿ ಶಿವಾನಂದ ಗುದ್ದನಗಿ, ಲಕ್ಷ್ಮಿ ಹಡಪದ, ಪುಷ್ಪಲತಾ, ಮನೋಜ್, ತಿಪ್ಪಣ್ಣ, ಮಂಜುನಾಥ್ , ಪಿ. ಸಿದ್ದೇಶ್ವರಪ್ಪ, ಕೆಪಿ ಕೇಜಿ ಯಶವಂತ್, ಅಶೋಕ್ ಹರ್, ಸರಸ್ವತಿ, ಲಕ್ಷ್ಮಿ, ಇತರರು ಪಾಲ್ಗೊಂಡಿದ್ದರು.