ಚಳ್ಳಕೆರೆ :
ಮುನಿರತ್ನ ವಿರುದ್ಧ ಭುಗಿಲೆದ್ದ ಆಕ್ರೋಶ
ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕ ಮುನಿರತ್ನ
ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಬೆಂಕಿಹಚ್ಚಿ ಆಕ್ರೋಶ
ವ್ಯಕ್ತಪಡಿಸಿದ ಘಟನೆ ಚಿತ್ರದುರ್ಗದ ಡಿಸಿ ಸರ್ಕಲ್ ನಲ್ಲಿ
ನಡೆಯಿತು.
ಛಲವಾದಿ ಸಮಾಜದ ಬಗ್ಗೆ ಶಾಸಕರ ಮುನಿರತ್ನ
ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರನ್ನು ಕೂಡಲೇ ಶಾಸಕ
ಸ್ಥಾನದಿಂದ ವಜಾ ಮಾಡಬೇಕು, ಜಾತಿನಿಂದನೆ ಪ್ರಕರಣ ದಾಖಲಿಸಿ
ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಛಲವಾದಿ ಸಮಾಜದ
ಮುಖಂಡರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ
ನೀಡಿದರು.