ಚಳ್ಳಕೆರೆ : ಮಧ್ಯ ಕರ್ನಾಟಕದ ಆರಾಧ್ಯದೈವ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ನಂತರ ಈಡೀ ತಾಲೂಕಿನಲ್ಲಿ ಮಾರಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.
ಅದರಂತೆ ಈಡೀ ತಾಲೂಕಿನಲ್ಲಿ ಒಂದು ತಿಂಗಳ ಕಾಲ ಪ್ರತಿ ಮಂಗಳವಾರ ಮಾರಿ ಹಬ್ಬದ ಆಚರಣೆಯನ್ನು ಆಯಾ ಗ್ರಾಮಗಳಲ್ಲಿ ಮಾಡುತ್ತಾರೆ .
ಇನ್ನೂ ಮಾರಿ ಹಬ್ಬಕ್ಕೆ ಟಗರು ಮಾರಟ ಭರ್ಜರಿಯಾಗಿ ನಡೆಯುತ್ತಿದೆ.
ಚಳ್ಳಕೆರೆ ನಗರದ ಅಜ್ಜನಗುಡಿ ರಸ್ತೆಯ ಕುರಿ ಮಾರುಕಟ್ಟೆಯಲ್ಲಿ ಸಾವಿರಾರು ಟಗರುಗಳ ಮಾರಾಟ ಭರ್ಜರಿಯಾಗಿ ವ್ಯಾಪಾರ ವಹಿವಾಟು ಜರುಗಿತು.
ಇನ್ನೂ ಹಬ್ಬದ ಸೀಜನ್ ನಲ್ಲಿ ಮಾಲೀಕರು ಲಾಭ ಪಡೆಯುವ ದಾವಂತದಲ್ಲಿ ಇದ್ದರೆ ಅದನ್ನು ಕೊಳ್ಳುವವರು ಟಗರು ತೂಕವನ್ನು ಅಳೆದು ಬೆಲೆ ಕಟ್ಟುವ ದೃಶ್ಯಗಳು ಕಂಡು ಬಂದವು.