ಚಳ್ಳಕೆರೆ :
ಒಳಮೀಸಲಾತಿ ಜಾರಿಗೆ ತರದಿದ್ದರೆ ಸಿಎಂ ಸ್ಥಾನಕ್ಕೆ
ರಾಜೀನಾಮೆ ನೀಡಿ
ಒಳಮೀಸಲಾತಿ ಜಾರಿಗೆ ತರದಿದ್ದರೆ ಸಿಎಂ ಸಿದ್ದರಾಮಯ್ಯ ಕೂಡಲೇ
ಅಧಿಕಾರದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ
ಸಮಿತಿ ಸಂಚಾಲಕ ಕೆಂಗುಂಟೆ ಜಯಣ್ಣ ಒತ್ತಾಯಿಸಿದರು.
ಹೊಳಲ್ಕೆರೆಯ ದಲಿತ ಸಂಘರ್ಷ ಸಮಿತಿ ಒಳಮೀಸಲಾತಿ
ಜಾರಿಗೆ ಆಗ್ರಹಿಸಿ ನಡೆಸಿದ ತಮಟೆ ಚಳುವಳಿಯಲ್ಲಿ ಭಾಗವಹಿಸಿ
ಮಾತಾಡಿದರು.
ಶೋಷಿತರ ಪರ ನಿಂತಿದ್ದ ಸಿದ್ದರಾಮಯ್ಯರನ್ನು
ಬಹು ಸಂಖ್ಯಾತರು ಗೆಲ್ಲಿಸಿ ಸಿಎಂ ಮಾಡಿದ್ದೇವೆ.
ಆದರೆ
ಸಿದ್ದರಾಮಯ್ಯ ಒಳಮೀಸಲಾತಿ ಜಾರಿ ಬಗ್ಗೆ ಮಾತಾಡುತ್ತಿಲ್ಲವೆಂದು
ಆಕ್ರೋಶ ಹೊರ ಹಾಕಿದರು.