ಚಳ್ಳಕೆರೆ :
ಚಿರತೆ ಪ್ರತ್ಯಕ್ಷ ಭಯ ಭೀತಗೊಂಡ ಗ್ರಾಮಸ್ಥರು
ಹೊಳಲ್ಕೆರೆಯ ಮಲ್ಲಸಿಂಗನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ ವಾಗುತ್ತಿದ್ದು,
ಗ್ರಾಮಸ್ಥರು ಭಯ ಭೀತಗೊಂಡಿದ್ದಾರೆ. ಚಿರತೆ ಬಂದು ಹೋಗುವ
ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳೆದ15
ದಿನಗಳಿಂದ ಕಂಡು ಬರುತ್ತಿದೆ. ಆಗಾಗ್ಗೆ ಜನ ಜಾನುವಾರುಗಳ
ಮೇಲೆ ದಾಳಿ ನಡೆಸುತ್ತಿದೆ.
ಇಂದು ಕೂಡ ದನಗಾಹಿ ಕೋಟೆಪ್ಪ
ಎನ್ನುವರ ಮೇಲೆ ದಾಳಿ ನಡೆಸಿದ್ದು, ಪ್ರಾಣಾಪಾಯದಿಂದ
ಪಾರಾಗಿದ್ದಾರೆ. ಗ್ರಾಮಸ್ಥರನ್ನು ಭಯ ಬೀಳಿಸಿರುವ ಚಿರತೆಯನ್ನು
ಅರಣ್ಯ ಇಲಾಖೆ ಹಿಡಿದು ಜನರ ಪ್ರಾಣ ರಕ್ಷಸುವಂತೆ ಮನವಿ
ಮಾಡಿದ್ದಾರೆ.