ಮಲ್ಲೂರಹಳ್ಳಿ ಗ್ರಾಮದ .ಅಂಗವಾಡಿ ಬಿ. ಕೇಂದ್ರದಲ್ಲಿ ಪೂರಕ ಪೌಷ್ಟಿಕ ಆಹಾರ ಶಿಬಿರಕ್ಕೆ ಚಾಲನೆ ನೀಡಿದ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ.
ನಾಯಕನಹಟ್ಟಿ:: ತಾಯಿ ಮಗುವಿನ ಆರೋಗ್ಯಕ್ಕ ಪೌಷ್ಟಿಕ ಆಹಾರ ಅವಶ್ಯಕ ಎಂದು ಮಲ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಹೇಳಿದ್ದಾರೆ.
ಮಂಗಳವಾರ ಹೋಬಳಿಯ ಮಲ್ಲೂರಹಳ್ಳಿ ಗ್ರಾಮದ ಅಂಗನವಾಡಿ .ಬಿ. ಕೇಂದ್ರದಲ್ಲಿ ಪೌಷ್ಟಿಕ ಆಹಾರ ಶಿಬಿರಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು
ಗ್ರಾಮೀಣ ಪ್ರದೇಶದ ಗರ್ಭಿಣಿ -ಬಾಣಂತಿಯರು ಮತ್ತು ಮಕ್ಕಳು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡಬೇಕು.
ಹಸಿ ತರಕಾರಿ ಸೊಪ್ಪು ಹಣ್ಣುಗಳು ಮೊಳಕೆ ಭರಿತ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು.
ಹಾಗೆ ಹೈಡ್ರೋನ್ ಉಪ್ಪನ್ನು ಬಳಸಬೇಕು ಶುದ್ಧ ಕುಡಿಯುವ ನೀರು ಬಗ್ಗೆ ಮಾಹಿತಿಯನ್ನು ತಿಳಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಸುಜಾತ ಮಾತನಾಡಿದರು ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ತಾಯಿ ಮಗುವಿನ ಜೀವ ರಚಿಸಲು ಪೌಷ್ಟಿಕ ಆಹಾರದ ಅಗತ್ಯವಿದೆ ಅಪೌಷ್ಟಿಕ ಮಕ್ಕಳ ಕಂಡು ಬರುತ್ತಿದ್ದು ತಾಯಿ ಮಗುವಿನ ಸಾವು ನಿಯಂತ್ರಿಸಲು ಸರ್ಕಾರ ಅಪೌಷ್ಟಿಕತೆ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿ ಪೋಷಣೆ ಅಭಿಯಾನ ಒಂದಾಗಿದೆ ತಾಯಿ ಮಕ್ಕಳ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವವಾಗಿದೆ. ಗರ್ಭಿಣಿ ಬಾಣಂತಿಯರು ಮತ್ತು ಮಕ್ಕಳು ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಸ್ವದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಸುಜಾತಾ, ಶಿಲ್ಪ ,ಜಯಲಕ್ಷ್ಮಿ, ರೇಖಮ್ಮ, ಗಂಗೀಬಾಯಿ ಭುವನೇಶ್ವರಿ ದೊಡ್ಡ ಮಲ್ಲಮ್ಮ ಅಶ್ವಿನಿ ಸೇರಿದಂತೆ ಗರ್ಭಿಣಿ -ಬಾಣತಿಯರು ಹಾಗೂ ಮಕ್ಕಳು ಗ್ರಾಮಸ್ಥರು ಇದ್ದರು