ಮಾದಾರ ಚನ್ನಯ್ಯ ಗುರುಪೀಠದ
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು
ಚಳ್ಳಕೆರೆ :
ಅ. 1 ರಿಂದ 4 ರವರೆಗೆ ನಗರದಲ್ಲಿ ಕ್ರೀಡಾ ಜಾತ್ರೆ
ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ 150ನೇ
ಜಯಂತಿ, ಅಂಗವಾಗಿ ಚಿತ್ರದುರ್ಗ ನಗರದಲ್ಲಿ ಕ್ರೀಡಾ ಜಾತ್ರೆ
ಹಮ್ಮಿಕೊಳ್ಳಲಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ದಲ್ಲಿ ಪತ್ರತಿಕಾ ಗೋಷ್ಟಿಯಲ್ಲಿ ಮಾತನಾಡಿದರು,
ಅ. 1 ರಿಂದ 4 ರವರೆಗೆ ಜೆ. ಎಂ. ಐ. ಟಿ. ಮೈದಾನದಲ್ಲಿ ಕ್ರಿಕೆಟ್
ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ 10 ತಂಡಗಳು
ಭಾಗವಹಿಸಲಿವೆ. ವಿಜೇತರಿಗೆ ನಗದು ಬಹುಮಾನ ಜೊತೆಗೆ ಟ್ರೋಫಿ
ನೀಡಲಾಗುವುದು ಎಂದರು.