ಶ್ರೀ ಪೂರ್ಣ ಮುತ್ತು ವಿದ್ಯಾ ಸಂಸ್ಥೆಯ ರಾಜಾಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಜಿಲ್ಲಾ ಹಾಗೂ ರಾಜ್ಯ ರಾಷ್ಟ್ರಮಟ್ಟಗಳಲ್ಲಿ ಪ್ರತಿಭೆಯ ಮೂಲಕ ಹೊರಹೊಮ್ಮಲಿ
ಸಿ ಆರ್ ಪಿ .
ಆರ್ ಈಶ್ವರಪ್ಪ.

ನಾಯಕನಹಟ್ಟಿ:: ಸೆ.2.
ನಾಯಕನಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪಟ್ಟಣದ ಶ್ರೀ ಪೂರ್ಣಮುತ್ತು ವಿದ್ಯಾ ಸಂಸ್ಥೆ( ರಿ) ಶ್ರೀ ರಾಜಾಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯ ಸುಮಾರು 16 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸಿಆರ್‌ಪಿ.
ಆರ್ ಈಶ್ವರಪ್ಪ ಹೇಳಿದ್ದಾರೆ

ಸೋಮವಾರ ಪಟ್ಟಣದ ಶ್ರೀ ಪೂರ್ಣ ಮುತ್ತು ವಿದ್ಯಾ ಸಂಸ್ಥೆ (ರಿ) ಶ್ರೀ ರಾಜಾಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲಾ ಆವರಣದಲ್ಲಿ ನಾಯಕನಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳ ನೀಡಿ ಮಾತನಾಡಿದ ಅವರು ಆಗಸ್ಟ್ 30ರಂದು ನಡೆದ ನಾಯಕನಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶ್ರೀ ರಾಜ ಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧಿಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ತಾಲೂಕು ಜಿಲ್ಲಾ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರತಿಭೆಯ ಮೂಲಕ ಭಾಗವಹಿಸಿ ಯಶಸ್ಸನ್ನ ಕಾಣಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಿ. ಹನುಮಂತಯ್ಯ, ಸಹ ಶಿಕ್ಷಕರಾದ ರವಿಕುಮಾರ್, ಕೆ.ಎಂ. ಮಲ್ಲಿಕಾರ್ಜುನ್, ಅರುಣಾಕ್ಷಿ, ಪಿ.ಒ ಲತಾ, ರೂಪ, ಕವಿತಾ, ಸೇರಿದಂತೆ ಶಾಲೆಯ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಇದ್ದರು

About The Author

Namma Challakere Local News
error: Content is protected !!