ಗೌರಸಮುದ್ರ ಮಾರಮ್ಮ ಐತಿಹಾಸಿಕ ಚರಿತ್ರೆವುಳ್ಳ ಮಾರಿ.
ರಾಮಾಂಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ : ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆಗೆ ಸಲ್ಲುತ್ತದೆ.
ಈ ಜಾತ್ರೆಗೆ ವಿಶೇಷವಾದ ಈ ಭಾಗದಲ್ಲಿ ಪ್ರತಿ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಶಕ್ತಿ ಈ ದೇವಿಗಿದೆ ಎನ್ನುತ್ತಾರೆ. ಈ ದೇವಿಗೆ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ.
ಬರದನಾಡು ಎಂದು ಹಣೆ ಪಟ್ಟಿಕೊಂಡ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ ರೀತಿಯಲ್ಲಿ ಬರವಿಲ್ಲ, ಮಳೆ ಬರಲಿ ಬಿಡಲಿ, ಬಿತ್ತಿದ ಬೆಳೆ ಕೈಗೆ ಸಿಗಲಿ ಬಿಡಲಿ ಆದರೆ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗೌರಸಮುದ್ರ ಮಾರಿ ಹಬ್ಬಕ್ಕೆ ಸಲ್ಲುತ್ತದೆ.
ಐತಿಹಾಸಿಕ ಹಿನ್ನಲೆ:
ಭಾದ್ರಪದ ಮಾಸದ ಸೆಪ್ಟಂಬರ್‌ತಿಂಗಳ ಮೊದಲ ಮಂಗಳವಾರ ನಡೆಯುವ ಮಾರಿ ಹಬ್ಬ ಊರತುಂಬೆಲ್ಲ ಸಡಗರ ಸಂಭ್ರಮ. ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಬಳಿ ಇರುವ ತುಮ್ಮಲು ಎಂಬಲ್ಲಿ ಮಾರಮ್ಮನ ಸಮಾಧಿ ಇದೆ ಎಂದು ಮತ್ತು ಈ ಸಮಾಧಿ ಬಳಿ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. ಸಮೀಪದ ಪಾಳೆಯಗಾರ ಪಟ್ಟುಗಾಳದ ರಾಯದುರ್ಗ ಹಾಗೂ ನಿಡಗಲ್ಲು ಪಾಳೆಯಗಾರರಿಗೆ ಸಂಬಧಿಸಿದಂತೆ ಮಾರಿಯ ಜೀವನದ ಘಟನೆಗಳನ್ನು ಕುರಿತು ನಂಬಲರ್ಹವಾದ ಹಾಗೂ ಆದರ ಪೂರ್ವದಂತ ಕಥೆಗಳು ಇವೆ.
ಈ ದೇವಿಯನ್ನು ಆನಾದಿಕಾಲದಿಂದಲೂ ದುರ್ಗಿ,ಕಾಳಿ, ಮಹೇಶ್ವರಿ, ಇಂತೆಲ್ಲ ಹೆಸರುಗಳಿದ ಮತ್ತು ಮಧ್ಯನ ವೇಳೆ ತನ್ನ ಜಾತ್ರೆಯನ್ನು ಆಚರಿಸುಕೊಳ್ಳುವುದರಿಂದ “ಮಧ್ಯಾನದ ಮಾರಿ” ಎಂತಲು ಕರೆಯುತ್ತಾರೆ. ಮಾರಿ ಮಾನವ ಜನ್ಮದಲ್ಲಿ ಹುಟ್ಟಿ ಸಾಧನೆಯ ಸಿದ್ದಿಪಡೆದು ದೈವತ್ವ ಪಡೆತಿದ್ದಾಳೆ ಎಂಬುದರಲ್ಲಿ ಸಂಶಯವಿಲ್ಲ ಎಂಬುದು ದೃಡನಂಬಿಕೆ.
ಗೌರಸಮುದ್ರ ಊರಿನ ಹಿನ್ನಲೆ”
ಗೌರಸಂದ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲ್ಲೂಕು ಕೇಂದ್ರದಿಂದ ಈಶಾನ್ಯಕ್ಕೆ 30 ಕಿ.ಮೀ ದೂರದಲ್ಲಿದೆ ಗಡಿ ಹಂಚಿಯನಲ್ಲಿ ಆರವತ್ತರ ದಶಕದಲ್ಲಿ ಮಾರಮ್ಮ ಗುಡಿ ಕೇವಲ ಕಾವಡೆ ಹುಲ್ಲಿನ ಗುಡಿಸಲು, ಗುಡಿಯಾಗಿದ್ದು ಈಗ ಊರೊಳಗೆ ಭವ್ಯ ದೇಗುಲವಾಗಿ ಮಾರ್ಪಟಿದೆ. ಈಕೆಯ ಪಕ್ಕದಲ್ಲಿ ಮ್ಯಾಸ ಬೇಡರ ಬೊಮ್ಮಬೇಡರ ಗುಡಿ ಕೂಡ ಇದೆ.
ಈ ಗ್ರಾಮವನ್ನು ಹಿಂದೆ ಗೌರಿ- ಚಂದ್ರ,ಎಂದು ಕರೆಯುತ್ತಿದ್ದರು ಎಂದು ಪ್ರತಿಥಿ ಇದೆ, ಕಾಲ ಕ್ರಮೇಣ ಉಚ್ಚಾರದಲ್ಲಿ ಗೌರ ಚಂದ್ರ, ಗೌರ್ಚಂದ್ರ, ಗೌಸಂದ್ರ, ಗೌರಸಮುದ್ರವಾಯಿತು, ಆನಂತರ ಇತ್ತಿಚೀನ ಸರ್ಕಾರಿ ದಾಖಲೆಗಳ ಪ್ರಕಾರ ಗೌರಸಮುದ್ರ ಎಂದಿದ್ದರೆ. ಇಲ್ಲಿನ ಮಾರಮ್ಮನ ಮೂಲೆ ನೆಲೆ ಗೌರಸಮದ್ರದ ತುಮ್ಮಲು ಎಂಬ ವಿಶಾಲವಾದ ಜಾಗದಲ್ಲಿ ಹುತ್ತದ ರೂಪದಲ್ಲಿ ಸ್ವರೂಪದಲ್ಲಿ ಮಾರಮ್ಮನ ಮೆರೆಮೂರ್ತಿ ಗ್ರಾಮದಲ್ಲಿ ಸಾಮಾನ್ಯವಾಗಿ ಮತ್ತು ಚಳ್ಳಕೆರೆಯಲ್ಲಿ ಕಾಗದ ಮತ್ತು ಬಳೆ ತಯಾರಾಗುತ್ತಿತ್ತು ಈ ಕಾಗದದ ಅಳತೆಗಳು‘ಗಜ’ ಎಂದು ಹೆಸರಿತ್ತು.
ದೀಪದ ಕಂಬದ ವಿಶೇಷ.:
ಯರಮಂಚನಾಯಕ ಆಗೀನ ಕಾಲದ ದೊರೆಯಾಗಿ ದೇವತೆಯ ಸೇವೆ ಮಾಡುತ್ತಿದ್ದು, ದೇವರ ನಂಬಿಕೆಯ ಪ್ರತೀಕವಾಗಿದೆ. ದೇವಿಯು ಗೌರ ಸಮುದ್ರದಿಂದ ತುಮ್ಮಲುಗೆ ಹೋಗುವ ಹಾದಿಯ ಮಧ್ಯದಲ್ಲಿ ಬಾವುಟ ಇಡಿದು ಮುಂದೆ ಸಾಗಬೇಕು ಮತ್ತು ಈ ತುಮ್ಮಲಿನಲ್ಲಿ ಯರಮಂಚನಾಯಕ ಸುಮಾರು 20 ಅಡಿ ಎತ್ತರದ ಸುಂಧರ ಕಲಾತ್ಮಾಕವಾದ ದೀಪ ಏರಿಸುವ ಕಲ್ಲಿನ ಕಂಬ ನೆಡಿಸಿ (ಸೂರ್ಯನಿಗೆ ನಮಸ್ಕಾರ)ನೀಡಿ ಪವಾಡ ಮೇರೆದ ಈ ಜಾತ್ರೆಯಲ್ಲಿ ಮಾರಿಯ ಹರಕೆ ತೀರಿಸಲು ಭಕ್ತಧಿಗಳು ಬಾಯಿಗೆ ಬಾಯಿ ಬೀಗ ಮತ್ತು ಬೇವಿನ ಸೀರೆ, ಮತ್ತು ಇನ್ನಿತರೆ ಹರಕೆಗಳನ್ನು ತೀರಿಸುತ್ತಾರೆ. ಒಂದತ್ತಿನಿಂದ ಸುಮಾರು 9 ಜನ ಭಕ್ತಾದಿಗಳು ಒಬ್ಬರ ಮೇಲೆ ಒಬ್ಬರು ನಿಂತು ಸಮೃಧ್ದಿಯ ಸಂಕೇತವಾದ ದೀಪವನ್ನು ಹಚ್ಚಿ ಧೇವಿಗೆ ಶರಣಾಗುತ್ತಾರೆ.
ಈಗೇ ದೀಪದ ಕಲಂಬವನ್ನು ಏರಿ ಹಣತೆ ಹಚ್ಚಿದ ನಂತರ ಹೊಸದಾಗಿ ಬೆಳೆದ ಈರುಳ್ಳಿ ಸೂರು ಬಿಡುತ್ತಾರೆ, ಮತ್ತು ಸಂಜೆಗತ್ತಲು ಕವಿಯದ ಮುನ್ನೆವೇ ಜಾಗ ಬಿಡುವ ಪಧ್ದತಿ ಹಲವು ದಶಕಗಳಿಂದ ಇದೆ.
ಗೌರಸಮುದ್ರ ಮಾರಮ್ಮನಿಗೆ 14 ಜನ ಸೌರದವರು ಬಾದ್ಯಸ್ತರಾಗಿರುತ್ತಾರೆ :
ಒಂದೇನೆ ಬಂಗಾರಿ, ಕೊಡಗಿನವನು, ಯಂಜಿಮತ್ತಿನವನು, ಬಿಡರಾಮಲ್ಲನು, ದ್ಯಾವರಪ್ಪ, ಸೂಲಿಕನ, ಚೆಂಟಿನವನು ಪಟ್ಟನವನು, ಎಮಲಬ್ಬವನರು ಬಿಲ್ಲೆಬೋರನವನು, ಸಿಲುಕಿನವನು, ಸುಕ್ಕೆಪಾಪನವನು, ಕನಕನವನು, ಮುಡೇಲನವನು, ಇದ್ದರು ಎಂದು ಪುರ್ವಕರ ಬಲವಾದ ನಂಬಿಕೆ.
ಹೇಳಿಕೆ :
ಜಾತ್ರೆ ಸೆ.3 ರಂದು ಇಂದು ಮಂಗಳವಾರ ವಿಜೃಂಬಣೆಯಂದ ದೊಡ್ಡ ಜಾತ್ರೆ ನಡೆಯಲಿದ್ದು ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರಲಿದ್ದಾರೆ. ಈ ಜಾತ್ರೆಗ ಬೇಕಾದ ವ್ಯವಸ್ಥೆಯನ್ನು ಜಿಲ್ಲಾ ಮತ್ತು ತಾಲೂಕು ಆಡಳಿತವತಿಯಿಂದ ಸಜ್ಜು ಮಾಡಲಾಗಿದೆ…
— ರೇಹಾನ್ ಪಾಷ
ತಹಶಿಲ್ದಾರ್ ಚಳ್ಳಕೆರೆ
ಹೇಳಿಕೆ ೨:
ಬುಡಕಟ್ಟು ಸಮುದಾಯದ ಆರಾಧ್ಯದೈವವಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ರಾಜ್ಯವಲ್ಲದೆ ಹೊರ ರಾಜ್ಯದಿಂದ ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ, ಮಧ್ಯಾಹ್ನದ ಮಾರಿದೇವಿ ಎಂದು ಪ್ರಸಿದ್ಧ ಪಡೆದ ಮಾರಮ್ಮ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿಂದ ಗ್ರಾಮ ಪಂಚಾಯತಿ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ..
…ಓಬಣ್ಣ ಗ್ರಾಮ ಪಂಚಾಯತಿ ಅಧ್ಯಕ್ಷ ಗೌರಸಮುದ್ರ
ಹೇಳಿಕೆ :
ಸತತವಾಗಿ ಒಂದು ತಿಂಗಳ ಕಾಲ ನಡೆಯುವ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ, ಸುತ್ತಲಿನ ಭಕ್ತರು ವಿವಿಧ ಹರಕೆಗಳು ತಿರಿಸುವುದರ ಜೊತೆಗೆ, ಮರಿಪರೀಷೆ ಮೂಲಕ ತೆರೆ ಕಾಣುತ್ತದೆ, ಈಗೇ ಈ ಭಕ್ತರು ಜಾತ್ರೆಗೆ ಆಗಮಿಸುವ ದಾರಿ ಮಾರ್ಗಗಳು, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಚತೆ, ಬಂದೊಬಸ್ತ್, ಈಗೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ…
ಎನ್.ವೈ.ಗೋಪಾಲಕೃಷ್ಣ ಶಾಸಕರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ